News Karnataka Kannada
Tuesday, May 14 2024
ಕ್ರೀಡೆ

ಐಪಿಎಲ್‌ನ 9: ಇಲೆವೆನ್‌ ಪಂಜಾಬ್‌ ನ್ನು ಮಣಿಸಿದ ಡೆಲ್ಲಿ ಡೇರ್‌ಡೆವಿಲ್ಸ್‌

Photo Credit :

ಐಪಿಎಲ್‌ನ 9: ಇಲೆವೆನ್‌ ಪಂಜಾಬ್‌ ನ್ನು ಮಣಿಸಿದ ಡೆಲ್ಲಿ ಡೇರ್‌ಡೆವಿಲ್ಸ್‌

ಹೊಸದಿಲ್ಲಿ: ಐಪಿಎಲ್‌ನ 9ನೇ ಆವೃತ್ತಿಯ ಶುಕ್ರವಾರದ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡವು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದೆದುರು 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

20 ಓವರ್‌ಗಳಲ್ಲಿ ಪಂಜಾಬ್ 9 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿತು. ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ 112 ರನ್‌ಗಳ ಗುರಿ ನೀಡಿತು. ಡೆಲ್ಲಿ ಪರ ಜಾಹೀರ್ ಖಾನ್ 14 ರನ್ ನೀಡಿ 1 ವಿಕೆಟ್ ಪಡೆದರೆ, ಮಿಶ್ರಾ 11 ರನ್‌ಗೆ 4 ವಿಕೆಟ್ ಪಡೆದು, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಪಂಜಾಬ್ ನೀಡಿದ ಸುಲಭವಾದ ಗುರಿ ಬೆನ್ನಟ್ಟಿದ ಡೆಲ್ಲಿ ಡೇರ್ ಡೆವಿಲ್ಸ್ ಕ್ವಿಂಟನ್ ಡಿಕಾಕ್ ಅವರ 59, ಸಂಜು ಸ್ಯಾಮ್ಸನ್ ಅವರ 33 ರನ್ ಸಹಾಯದಿಂದ 13.3 ಓವರ್‌ಗಳಲ್ಲಿಯೇ ಜಯಗಳಿಸಿತು. ಇದರೊಂದಿಗೆ ಐಪಿಎಲ್ 9ನೇ ಆವೃತ್ತಿಯ ಪಂದ್ಯದಲ್ಲಿ  ಮೊದಲ ಗೆಲುವು ಪಡೆಯಿತು.

ಶ್ರೇಯಸ್‌ ಅಯ್ಯರ್‌ ಅವರನ್ನು ಬೇಗನೇ ಕಳೆದುಕೊಂಡ ಬಳಿಕ ಕಾಕ್‌ ಮತ್ತು ಸ್ಯಾಮ್ಸನ್‌ ತಂಡವನ್ನು ಆಧರಿಸಿದರು. ಪಂಜಾಬ್‌ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಅವರಿ ಬ್ಬರು ದ್ವಿತೀಯ ವಿಕೆಟಿಗೆ 91 ರನ್‌ ಪೇರಿಸಿ ತಂಡದ ಗೆಲುವು ಖಚಿತಪಡಿಸಿದರು. ಗೆಲ್ಲಲು 12 ರನ್‌ ಗಳಿರುವಾಗ ಸ್ಯಾಮ್ಸನ್‌ ಔಟಾದರು. 32 ಎಸೆತ ಎದುರಿಸಿದ ಅವರು 33 ರನ್‌ ಹೊಡೆದರೆ ಕಾಕ್‌ 59 ರನ್‌ ಗಳಿಸಿ ಅಜೇಯರಾಗಿ ಉಳಿದರು. 42 ಎಸೆತ ಎದುರಿಸಿದ ಅವರು 9 ಬೌಂಡರಿ ಮತ್ತು 1 ಸಿಕ್ಸರ್‌ ಬಾರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು