ಬೆಂಗಳೂರು : ಟೀಂ ಇಂಡಿಯಾ , ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗದ ಬೌಲರ್ ಹಾಗೂ ಕನ್ನಡಿಗ ಪ್ರಸಿದ್ಧ ಕೃಷ್ಣಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ .
ಕೋಲ್ಕತ್ತಾ ತಂಡದಲ್ಲಿ ಈಗಾಗಲೇ ವರುಣ್ ಚಕ್ರವರ್ತಿ , ಸಂದೀಪ್ ವಾರಿಯರ್ ಹಾಗೂ ಟೀಮ್ ಸೀಫರ್ಟ್ಗೆ ಕೊರೋನಾ ದೃಢಗೊಂಡಿದ್ದು, ಐಪಿಎಲ್ ರದ್ದಾದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸಿದ ಪ್ರಸಿದ್ಧ ಕೃಷ್ಣ ಗೆ ಪಾಸಿಟಿವ್ ಬಂದಿದೆ .
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಹಾಗೂ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ಗೆ ಟೀಂ ಇಂಡಿಯಾದಲ್ಲಿ ಪ್ರಸಿದ್ಧ ಕೃಷ್ಣ ಅವಕಾಶ ಪಡೆದುಕೊಂಡಿದ್ದಾರೆ.