News Karnataka Kannada
Saturday, May 11 2024
ಕ್ರೀಡೆ

ಮೊದಲ ಏಕದಿನ: ಆಸೀಸ್ ವಿರುದ್ಧ ಟೀಂ ಇಂಡಿಯಾಗೆ ಸೋಲು

Photo Credit :

ಮೊದಲ ಏಕದಿನ: ಆಸೀಸ್ ವಿರುದ್ಧ ಟೀಂ ಇಂಡಿಯಾಗೆ ಸೋಲು

ಸಿಡ್ನಿ: ಅರೋನ್ ಪಿಂಚ್ ಮತ್ತು ಸ್ಮೀವ್ ಸ್ಮಿತ್ ಬಾರಿಸಿದ ಶತಕದ ನೆರವಿನಿಂದ ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ 66 ರನ್ ಗೆಲುವು ದಾಖಲಿಸಿಕೊಂಡಿದೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾಗೆ ಪಿಂಚ್ ಮತ್ತು ವಾರ್ನರ್ 156 ರನ್ ಜತೆಯಾಟ ಒದಗಿಸಿಕೊಟ್ಟರು. ಆಸ್ಟ್ರೇಲಿಯಾ ಆರು ವಿಕೆಟಿಗೆ 374 ರನ್ ಕಳೆ ಹಾಕಿತು.

ಇದಕ್ಕೆ ಉತ್ತರಿಸಿದ ಟೀಂ ಇಂಡಿಯಾ ಆರಂಭದಲ್ಲೇ ಬೇಗನೆ ವಿಕೆಟ್ ಕಳಕೊಂಡಿತು. ಮಯಂಕ್ ಅಗರ್ವಾಲ್ ಕೇವಲ 22 ರನ್ ಮಾಡಿದರೆ, ಕೊಹ್ಲಿ 21 ರನ್ ಮಾಡಿ ನಿರ್ಗಮಿಸಿದರು. ಇದರ ಬಳಿಕ ಶ್ರೇಯಸ್ ಅಯ್ಯರ್(2) ಮತ್ತು ಕೆ.ಎಲ್.ರಾಹುಲ್(12) ಕೊಹ್ಲಿ ಹಾದಿಯಲ್ಲೇ ಪೆವಿಲಿಯನ್ ಗೆ ಸಾಗಿದರು.

ಧವನ್ 74, ಹಾರ್ದಿಕ್ ಪಾಂಡ್ಯ 90 ರನ್ ಮಾಡಿ ತಂಡಕ್ಕೆ ಗೆಲುವು ತಂದುಕೊಡಲು ಪ್ರಯತ್ನಿಸಿದರೂ ಇದು ಸಾಧ್ಯವಾಗಲಿಲ್ಲ. ರವೀಂದ್ರ ಜಡೇಜಾ 25 ರನ್ ಬಾರಿಸಿ ನಿರ್ಗಮಿಸಿದರು.

ಆಸ್ಟ್ರೇಲಿಯಾ ನಾಯಕ ಫಿಂಚ್ 114 ಮತ್ತು ಸ್ಮಿತ್ 105 ರನ್ ಮಾಡಿ ತಂಡದ ದೊಡ್ಡ ಮೊತ್ತಕ್ಕೆ ಕಾರಣರಾದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು