ದುಬೈ: ಭಾರತ ಮತ್ತು ಇಂಗ್ಲೆಂಡ್ ನಡುವೆ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದು, ಇಂಗ್ಲೆಂಡಿನ ಆಲ್ ರೌಂಡರ್ ಬೆನ್ ಸ್ಟೋಕ್ ಗೆ ಅವಾಚ್ಯ ಶಬ್ದ ಬಳಸಿದ್ದಕ್ಕಾಗಿ ಐಸಿಸಿ ಛೀಮಾರಿ ಹಾಕಿದೆ.
ಮೈದಾನದಲ್ಲಿ ಅಂತಾರಾಷ್ಟ್ರೀಯ ಆಟದ ವೇಳೆ ಐಸಿಸಿಯ 2.1.4 ದಂಡ ಸಂಹಿತೆ ಪ್ರಕಾರ ಅಶ್ಲೀಲ ಪದಗಳು ಸೇರಿದಂತೆ ಅವಾಚ್ಯ ಶಬ್ದಗಳನ್ನಾಗಲಿ ಆಟಗಾರರು ಬಳಸುವಂತಿಲ್ಲ .
ಐಸಿಸಿಯು ಇಂಗ್ಲೆಂಡಿನ ಬೆನ್ ಸ್ಟೋಕ್ ಖಾತೆಗೆ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಒಂದು ನ್ಯೂನ್ಯತಾ ಅಂಕ ನೀಡಿದ್ದು, ಮುಂದಕ್ಕೆ 4 ನ್ಯೂನ್ಯತೆ ಅಂಕಗಳನ್ನು 24 ತಿಂಗಳ ಸಮಯದಲ್ಲಿ ಗಳಿಸಿದ್ದಲ್ಲಿ ಬೆನ್ ಸ್ಟೋಕ್ ಅವರನ್ನು ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ಅಮಾನತು ಮಾಡಲಾಗುತ್ತದೆ ಎಂದು ಐಸಿಸಿ ಎಚ್ಚರಿಸಿದೆ.