News Karnataka Kannada
Monday, April 29 2024
ಕ್ರೀಡೆ

T20 WORLD CUP : ಶ್ರಿಲಂಕಾಕ್ಕೆ 172 ರನ್​ಗಳ ಟಾರ್ಗೆಟ್​ ನೀಡಿದ ಬಾಂಗ್ಲಾದೇಶ

Cricket Ball 10082021
Photo Credit :

ಟಿ 20 ವಿಶ್ವಕಪ್ ಎರಡನೇ ದಿನವಾದ ಇಂದು ಶ್ರಿಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿವೆ. ಟಾಸ್​ ಸೋತು ಬ್ಯಾಟಿಂಗ್​​ ಇಳಿದ ಬಾಂಗ್ಲಾ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​​ ಕಳೆದುಕೊಂಡು 171 ರನ್​ ಗಳಿಸಿದ್ದು, ಲಂಕಾ ತಂಡಕ್ಕೆ 172ರನ್​ಗಳ ಟಾರ್ಗೆಟ್​ ನೀಡಿದೆ.

ಬಾಂಗ್ಲಾ ಪರ ಓಪನರ್​ ಆಗಿ ಕಣಕ್ಕಿಳಿದ ಲಿಟನ್​ ದಾಸ್​ ಮತ್ತು ಮೊಹಮ್ಮದ್ ನೈಮ್ ಜೋಡಿ 5.5 ಓವರ್​ಗಳಲ್ಲಿ 40 ರನ್​​ಗಳಿಸಿತು. 16 ರನ್​​ ಗಳಿಸಿದ್ದಾಗ ಲಿಟನ್​ ದಾಸ್,​ ಲಹಿರು ಕುಮಾರಗೆ ವಿಕೆಟ್​ ಒಪ್ಪಿಸಿದರು.

ನಂತರ ಬಂದ ಶಕೀಬ್ ಅಲ್ ಹಸನ್ ಕ್ರೀಸ್​ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೇವಲ 10 ರನ್​ಗಳಿಸಿ ಔಟಾದರು. ನಂತರ ಬಂದ ಅನುಭವಿ ಬ್ಯಾಟರ್​ ಮುಷ್ಫಿಕರ್ ರಹೀಮ್, ಮೊಹಮ್ಮದ್ ನೈಮ್ ಜೊತೆ ಸೇರಿ ಉತ್ತಮ ರನ್​​ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು.

ಮೊಹಮ್ಮದ್ ನೈಮ್ 62 ರನ್​ಗಳಿಸಿ ಫರ್ನಾಂಡೊಗೆ ವಿಕೆಟ್​ ಒಪ್ಪಿಸಿದರು.ನಂತರ ಬಂದ ಅಫೀಫ್ ಹೊಸೇನ್ ಕೇವಲ 7 ರನ್​ಗಳಿಸಿ ನಿರ್ಗಮಿಸಿದರು. ಆ ನಂತರ ಬಂದ ನಾಯಕ ಮಹ್ಮದುಲ್ಲಾ 10* ರನ್​ಗಳಿಸಿ ತಂಡಕ್ಕೆ ತಮ್ಮದೆ ಆದ ಕೊಡುಗೆ ನೀಡಿದರು.

ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ ರಹೀಮ್​​ (57)* ಅಂತಿಮ ಹಂತದವರೆಗೂ ತಂಡಕ್ಕೆ ನೇರವಾದರು. ಇನ್ನೂ ಶ್ರೀಲಂಕಾ ಪರ ಫರ್ನಾಂಡೊ, ಲಹಿರು ಕುಮಾರ, ಚಮಿಕ ಕರುಣರತ್ನೆ ತಲಾ ಒಂದು ವಿಕೆಟ್​​ ಪಡೆದು ಮಿಂಚಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು