News Karnataka Kannada
Monday, April 29 2024
ಕ್ರೀಡೆ

ಪುಣೆಯ ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್ ನ ಕ್ರೀಡಾಂಗಣಕ್ಕೆ ನೀರಜ್ ಚೋಪ್ರಾ ಹೆಸರಿಡುವ ಸಾಧ್ಯತೆ

Niraj Hariyana 08082021
Photo Credit :
ಪುಣೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆಗಸ್ಟ್ 23 ರಂದು ಪುಣೆಯ ಡಿಫೆನ್ಸ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಟೆಕ್ನಾಲಜಿ (ಡಿಐಎಟಿ) ಮತ್ತು ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್ (ಎಎಸ್‌ಐ) ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಕ್ಯಾಂಪಸ್ ನ ಕ್ರೀಡಾಂಗಣಕ್ಕೆ ಟೋಕಿಯೊ ಒಲಂಪಿಕ್ಸ್  ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾ ಅವರ ಹೆಸರಿಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ರಕ್ಷಣಾ ಸಚಿವರು ಸೇನಾ ಕ್ರೀಡಾ ಸಂಸ್ಥೆಗೆ ಭೇಟಿ ನೀಡಿದಾಗ, ಕ್ಯಾಂಪಸ್‌ನಲ್ಲಿರುವ ಕ್ರೀಡಾಂಗಣಕ್ಕೆ ‘ನೀರಜ್ ಚೋಪ್ರಾ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್, ಪುಣೆ ಕಂಟೋನ್ಮೆಂಟ್’ ಎಂದು ಹೆಸರಿಡುವ ಸಾಧ್ಯತೆಯಿದೆ ಎಂದು ರಕ್ಷಣಾ ಪಿಆರ್‌ಒ ಪ್ರಕಟಣೆ ತಿಳಿಸಿದೆ.
 ಟೋಕಿಯೊ ಒಲಂಪಿಕ್ಸ್‌ನಲ್ಲಿ ಜಾವೆಲಿನ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತೀಯ ಸೇನೆಯ ನಾಯಕ್ ಸುಬೇದಾರ್ ನೀರಜ್ ಚೋಪ್ರಾ ಅವರು ಸ್ವತಃ ಎಎಸ್‌ಐನಲ್ಲಿ ತರಬೇತಿ ಪಡೆದಿದ್ದರು.
ಪ್ರಕಟಣೆಯ ಪ್ರಕಾರ, ರಾಜನಾಥ್ ಸಿಂಗ್ ಅವರು ಎಎಸ್‌ಐಗೆ ಭೇಟಿ ನೀಡಿದಾಗ, 16 ಒಲಿಂಪಿಕ್ಸ್ ಕ್ರಿಡಾಪಟುಗಳನ್ನು  ಸನ್ಮಾನಿಸಲಿದ್ದಾರೆ. ಜೊತೆಗೆ ಸೈನ್ಯ ಮತ್ತು ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡುತ್ತಾರೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು