News Karnataka Kannada
Monday, May 20 2024
ಕ್ರೀಡೆ

ಪಂತ್, ರೋಹಿತ್ ಭರ್ಜರಿ ಆಟ: ಸರಣಿ ಸಮಬಲಗೊಳಿಸಿದ ಟೀಂ ಇಂಡಿಯಾ

Photo Credit :

ಪಂತ್, ರೋಹಿತ್ ಭರ್ಜರಿ ಆಟ: ಸರಣಿ ಸಮಬಲಗೊಳಿಸಿದ ಟೀಂ ಇಂಡಿಯಾ

ಅಕ್ಲಂಡ್: ನಾಯಕ ರೋಹಿತ್ ಶರ್ಮಾ ಬಾರಿಸಿದ ವೇಗದ ಅರ್ಧಶತಕದಿಂದ ಟೀಂ ಇಂಡಿಯಾ ಎರಡನೇ ಟಿ-20ಯಲ್ಲಿ ಏಳು ವಿಕೆಟ್ ಗೆಲುವು ದಾಖಲಿಸಿಕೊಂಡಿದೆ.

ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯು 1-1ರ ಸಮಬಲದಲ್ಲಿದೆ.

ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಿ 8 ವಿಕೆಟ್ ಕಳಕೊಂಡು 158 ರನ್ ಮಾಡಿತು. ಕಾಲಿನ್ ಡೆ ಗ್ರಾಂಡ್ ಹೊಮ್ಮೆ ಟಿ20ಯ ಚೊಚ್ಚಲ ಅರ್ಧಶತಕ ಬಾರಿಸಿದರು. ರೊಸ್ ಟೇಲರ್ 42 ರನ್ ಸಿಡಿಸಿ ತಂಡಕ್ಕೆ ನೆರವಾದರು.

ಕೃನಾಲ್ ಪಾಂಡ್ಯ 28 ರನ್ ಗಳಿಗೆ ಮೂರು ವಿಕೆಟ್ ಉರುಳಿಸಿದರೆ, ಖಲೀಲ್ ಅಹ್ಮದ್, ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ತಲಾ ಒಂದೊಂದು ವಿಕೆಟ್ ಪಡೆದರು.

ಇದಕ್ಕೆ ಉತ್ತರಿಸಿದ ಟೀಂ ಇಂಡಿಯಾಗೆ ರೋಹಿತ್ ಶರ್ಮಾ(50), ಶಿಖರ್ ಧವನ್(30), ರಿಷಬ್ ಪಂತ್(40) ರನ್ ಬಾರಿಸಿ ಗೆಲುವು ತಂದುಕೊಟ್ಟರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು