News Karnataka Kannada
Monday, April 29 2024
ಕ್ರೀಡೆ

ಪಂಜಾಬನ್ನು ಹೀನಾಯವಾಗಿ ಸೋಲಿಸಿದ ಸನ್ ರೈಸರ್ಸ್

Photo Credit :

ಪಂಜಾಬನ್ನು ಹೀನಾಯವಾಗಿ ಸೋಲಿಸಿದ ಸನ್ ರೈಸರ್ಸ್

ಹೈದರಾಬಾದ್: ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 25ನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್ XI ವಿರುದ್ಧ ಸನ್ ರೈಸರ್ಸ್ ಹೈದಬಾರಾದ್ 13 ರನ್‌ಗಳ ಅಂತರದಲ್ಲಿ ಗೆಲುವು ತಂದುಕೊಟ್ಟರು.

133 ರನ್ ಗುರಿಯ ಬೆನ್ನುಹತ್ತಿದ ಕಿಂಗ್ಸ್ ಇಲೆವನ್ ಪಂಜಾಬ್ ತಂಡದವರು 19.2 ಓವರ್ ಗಳಲ್ಲಿ 119 ರನ್ ಗಳಿಗೆ ತಮ್ಮ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡರು. ಮೊದಲು ಬ್ಯಾಟಿಂಗ್ ಆಯ್ದುಕೊಂಡ ಸನ್ ರೈಸರ್ಸ್ 133 ರನ್ ಗಳ ಕಡಿಮೆ ಮೊತ್ತವನ್ನು ಪೇರಿಸಿತು. ಪಂಜಾಬ್ ತಂಡದ ಬೌಲರ್ ಗಳು ಉತ್ತಮ ಬೌಲಿಂಗ್ ಧಾಳಿ ನಡೆಸಿ ಹೈದರಾಬಾದ್ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದರು.

ಮೊದಲಿಗೆ ಉತ್ತಮ ಆಟವನ್ನು ಆಡಿದ ಪಂಜಾಬ್ ತಂಡದ ಆಟಗಾರರಾದ ಕ್ರಿಸ್ ಗೇಲ್ 23 ರನ್ ಗಳಿಸಿ, ಕನ್ನಡಿಗ ಕೆ.ಎಲ್.ರಾಹುಲ್ 32 ರನ್ ಗಳಿಸಿದರು. ಆದರೆ 8ನೇ ಓವರ್ ನಲ್ಲಿ ಮೊದಲಿಗೆ ರಾಹುಲ್ ಔಟ್ ಆದರೆ, ನಂತರ ಕ್ರಿಸ್ ಗೇಲ್ ಅವರು ಕೂಡ ಅದೇ ಹಾದಿ ಹಿಡಿದು ಪೆವಿಲಿಯನ್ ನತ್ತ ಸಾಗಿದರು.

ನಂತರ ಹೈದರಾಬಾದ್ ನ ಬೌಲರ್ ಗಳು ಮೇಲುಗೈ ಸಾಧಿಸಿದರು. ಸನ್ ರೈಸರ್ಸ್ ನ ಆಟಗಾರರಾದ ರಶೀದ್ ಖಾನ್ 19, ಶಿಖರ್ ಧವನ್ 11, ಮನೀಷ್ ಪಾಂಡೆ 54, ಶಕೀಬ್ 28, ಯೂಸುಫ್ ಪಠಾಣ್ 21 ರನ್ ಗಳಿಸಿ ಪಂದ್ಯ ಗೆಲ್ಲುವಲ್ಲಿ ಸಹಕರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
189

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು