ಪಾಣಿಪತ್ : ಟೋಕಿಯೊ ಒಲಿಂಪಿಕ್ಸ್ 2021ರ ಚಿನ್ನದ ಪದಕ ವಿಜೇತ ಅಥ್ಲೆಟಿಕ್ ನೀರಜ್ ಚೋಪ್ರಾ ತಮ್ಮ ಪೋಷಕರ ಸಣ್ಣ ಕನಸನ್ನು ನನಸು ಮಾಡಿದ್ದಾರೆ. ಅವರಿಗಿದ್ದ ಕನಸು ಏನೆಂದರೆ ವಿಮಾನದಲ್ಲಿ ಒಮ್ಮೆ ಕುಳಿತುಕೊಂಡು ಹಾರಾಟ ನಡೆಸಬೇಕೆಂದು.
ಒಲಿಂಪಿಕ್ಸ್ ನ ಜಾವಲಿನ ಥ್ರೋನಲ್ಲಿ ಚಿನ್ನದ ಪದಕ ಗೆದ್ದ 23 ವರ್ಷದ ಮಗ ನೀರಜ್ ಚೋಪ್ರಾ ಪೋಷಕರ ಕನಸನ್ನು ಇಂದು ಈಡೇರಿಸಿದ್ದಾರೆ. ತಂದೆ-ತಾಯಿಯ ಪುಟ್ಟ ಆಸೆಯೊಂದನ್ನು ಇಂದು ತೀರಿಸಿ ಸಂತೋಷವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಪೋಷಕರೊಂದಿಗೆ ವಿಮಾನದೊಳಗೆ ಕಾಲಿಡುವ ಮತ್ತು ವಿಮಾನದೊಳಗೆ ಕುಳಿತುಕೊಂಡ ಮೇಲೆ ತೆಗೆದುಕೊಂಡ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರ ಈ ನಡೆಗೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಹರಿಸುತ್ತಿದ್ದಾರೆ.