News Karnataka Kannada
Monday, April 29 2024
ಕ್ರೀಡೆ

ಟೋಕಿಯೊ ಒಲಂಪಿಕ್ಸ್‌: ಮಹಿಳಾ ಹಾಕಿ ತಂಡಕ್ಕೆ ಕೈ ತಪ್ಪಿದ ಕಂಚು

Hockey Team 01082021
Photo Credit :

ಟೋಕಿಯೊ: ಟೋಕಿಯೊ ಒಲಂಪಿಕ್ಸ್‌ನಲ್ಲಿ ಭಾರತೀಯ ಮಹಿಳೆಯರ ಹಾಕಿ ತಂಡಕ್ಕೆ ಕಂಚು ಕೈತಪ್ಪಿದೆ. ಗ್ರೇಟ್ ಬ್ರಿಟನ್ ವಿರುದ್ಧ ಕಂಚಿನ ಪದಕಕ್ಕೆ ತೀವ್ರ ಸೆಣಸಾಟ ನಡೆಸಿ ಭಾರತದ ಮಹಿಳಾ ತಂಡ ನಿರ್ಗಮಿಸಿದೆ.

ಶುಕ್ರವಾರ ಬೆಳಿಗ್ಗೆ ನಡೆದ ಪಂದ್ಯದಲ್ಲಿ ಭಾರತ ತಂಡ ಗ್ರೇಟ್ ಬ್ರಿಟನ್ ವಿರುದ್ಧ 1 ಗೋಲುಗಳ ಅಂತರದಲ್ಲಿ ಪರಾಭವ ಕಂಡಿದೆ. ಭಾರತ ಮಹಿಳಾ ಹಾಕಿ ತಂಡ 4ನೇ ಸ್ಥಾನ ಪಡೆಯುವ ಮೂಲಕ ಈ ಬಾರಿಯ ಒಲಿಂಪಿಕ್ ಗೆ ವಿದಾಯ ಹೇಳಿದೆ.

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಮಹಿಳಾ ಹಾಕಿ ತಂಡದ ಶ್ರಮಕ್ಕೆ ಪ್ರಧಾನಿ ಅಭಿನಂದನೆ ಸಲ್ಲಿಸಿದ್ದಾರೆ. ‘ತಂಡದ ಸಾಧನೆ ಹೆಮ್ಮೆ ತಂದಿದೆ. ನಮ್ಮ ಮಹಿಳಾ ಹಾಕಿ ತಂಡದ ಸಾಧನೆಯನ್ನು ನಾವು ಎಂದೆಂದಿಗೂ ನೆನಪಿನಲ್ಲಿ ಇಡುತ್ತೇವೆ. ಸ್ವಲ್ಪದರಲ್ಲಿ ನಮಗೆ ಕಂಚಿನ ಪದಕ ಕೈತಪ್ಪಿ ಹೋಗಿದೆ. ಆದರೆ, ಈ ತಂಡದ ಪರಿಶ್ರಮ, ಸಾಧನೆ ನವ ಭಾರತದ ಉತ್ಸಾಹವನ್ನು ಪ್ರತಿಫಲಿಸುತ್ತದೆ’ ಎಂದು ಪ್ರಧಾನಿ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 5 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು