News Karnataka Kannada
Monday, April 29 2024
ಕ್ರೀಡೆ

ಸೆಮಿ ಫೈನಲ್‌ ನಲ್ಲಿ ಅರ್ಜೆಂಟೀನಾ ವಿರುದ್ದ ಸೋಲು ಕಂಡ ಭಾರತ ಮಹಿಳಾ ಹಾಕಿ ತಂಡ

Indian Women Hockey Team
Photo Credit :

ಟೋಕಿಯೋ ; ಒಲಿಂಪಿಕ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಾಕಿಯ ಸೆಮಿ ಫೈನಲ್ ಪ್ರವೇಶಿಸಿ ಇತಿಹಾಸ ಬರೆದಿದ್ದ ಭಾರತ ಮಹಿಳಾ ತಂಡ ಫೈನಲ್​ಗೇರಲು ವಿಫಲವಾಗಿದೆ. ಅರ್ಜೇಂಟಿನಾ ವಿರುದ್ಧ ನಡೆದ ಸೆಮಿ ಫೈನಲ್ ಕದನದಲ್ಲಿ ಭಾರತ 1-2 ಗೋಲುಗಳ ಅಂತರದಿಂದ ಸೋಲು ಕಂಡಿದೆ. ಆದರೆ, ಭಾರತಕ್ಕೆ ಕಂಚು ಗೆಲ್ಲುವ ಅವಕಾಶವಿದ್ದು, ಇನ್ನೊಂದು ಸೆಮಿ ಫೈನಲ್​ನಲ್ಲಿ ಸೋಲುವ ತಂಡದ ವಿರುದ್ಧ ಪಂದ್ಯವಿದೆ. ಇದರಲ್ಲಿ ಭಾರತ ಮಹಿಳಾ ಹಾಕಿ ತಂಡ ಗೆದ್ದರೆ ಕಂಚಿನ ಪದಕ ಮುಡಿಗೇರಿಸಿಕೊಳ್ಳಲಿದೆ.

ಪಂದ್ಯ ಆರಂಭವಾದ ಕೇವಲ ಎರಡು ನಿಮಿಷದಲ್ಲೇ ಭಾರತಕ್ಕೆ ಮೊದಲ ಗೋಲು ದಕ್ಕಿತು. ವಂದನಾ ಅವರು ತಂಡಕ್ಕೆ ಖಾತೆ ತೆರೆದು ಮೊದಲ ಕ್ವಾರ್ಟರ್​ನಲ್ಲಿ ಭಾರತ 1-0 ಮುನ್ನಡೆ ಸಾಧಿಸುವಂತೆ ಮಾಡಿದರು. ಎರಡನೇ ಕ್ವಾರ್ಟರ್​ನ ಆರಂಭದಲ್ಲಿ ಅರ್ಜೇಂಟಿನಾ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದುಕೊಂಡು ತನ್ನ ಖಾತೆ ತೆರೆಯಿತು. ಈ ಮೂಲಕ ಮೊದಲಾರ್ಧದ ವೇಳೆಗೆ ಉಭಯ ತಂಡಗಳು ಸಲಬಲ ಸಾಧಿಸಿದವು. ಮೂರನೇ ಕ್ವಾರ್ಟರ್​ನಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಅದ್ಭುತವಾಗಿ ಉಪಯೋಗಿಸಿಕೊಂಡ ಅರ್ಜೇಂಟಿನಾ 2-1ರ ಮುನ್ನಡೆ ಸಾಧಿಸಿತು. ಮೂರನೇ ಮತ್ತು ಅಂತಿಮ ನಾಲ್ಕನೆ ಕ್ವಾರ್ಟರ್​ನಲ್ಲಿ ಆಕ್ರಮಣ ಆಟ ಪ್ರದರ್ಶಿಸಿದ ಅರ್ಜೇಂಟಿನಾ ಭಾರತಕ್ಕೆ ಗೋಲು ದಾಖಲಿಸಲು ಅವಕಾಶವೇ ಕೊಡಲಿಲ್ಲ. ಅಂತಿಮವಾಗಿ ಅರ್ಜೇಂಟಿನಾ 2-1 ಗೋಲುಗಳ ಅಂತರದಿಂದ ಗೆದ್ದು ಫೈನಲ್​ಗೆ ಪ್ರವೇಶ ಪಡೆದಿದೆ. ಭಾರತ ಮಹಿಳಾ ಹಾಕಿ ತಂಡದ ಚೊಚ್ಚಲ ಫೈನಲ್ ಕನಸು ಭಗ್ನಗೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು