News Karnataka Kannada
Saturday, May 04 2024
ಕ್ರೀಡೆ

ಟೀಂ ಇಂಡಿಯಾ ಹಲವು ಹುದ್ದೆಗಳಿಗೆ ʼBCCIʼನಿಂದ ಅರ್ಜಿ ಆಹ್ವಾನ

Bcci
Photo Credit :

ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್, ಫೀಲ್ಡಿಂಗ್ ಕೋಚ್, ಬೌಲಿಂಗ್ ಕೋಚ್ ಮತ್ತು ಬ್ಯಾಟಿಂಗ್ ಕೋಚ್ ಹುದ್ದೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅರ್ಜಿಗಳನ್ನ ಆಹ್ವಾನಿಸಿದೆ. ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾದ ಈಗಿನ ಕೋಚಿಂಗ್ ಸಿಬ್ಬಂದಿಯ ಎರಡು ವರ್ಷಗಳ ಒಪ್ಪಂದ ಅಂತ್ಯವಾಗಿದೆ.

ಬಿಸಿಸಿಐ ಹೊರಡಿಸಿದ ಸುತ್ತೋಲೆಯ ಪ್ರಕಾರ, ಮುಖ್ಯ ತರಬೇತುದಾರನ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ‘ಕನಿಷ್ಠ 30 ಟೆಸ್ಟ್ ಪಂದ್ಯಗಳು ಅಥವಾ 50 ಏಕದಿನ ಪಂದ್ಯಗಳನ್ನು ಆಡಿರಬೇಕು; ಅಥವಾ, ಕನಿಷ್ಠ 2 ವರ್ಷಗಳ ಅವಧಿಗೆ ಪೂರ್ಣ ಸದಸ್ಯ ಟೆಸ್ಟ್ ಪ್ಲೇಯಿಂಗ್ ನೇಷನ್ʼನ ಮುಖ್ಯ ತರಬೇತುದಾರ; ಅಥವಾ ಅಸೋಸಿಯೇಟ್ ಸದಸ್ಯ /ಐಪಿಎಲ್ ತಂಡ ಅಥವಾ ತತ್ಸಮಾನ ಅಂತಾರಾಷ್ಟ್ರೀಯ ಲೀಗ್ʼಗಳು/ ಪ್ರಥಮ ದರ್ಜೆ ತಂಡಗಳು/ ರಾಷ್ಟ್ರೀಯ ಎ ತಂಡಗಳ ಮುಖ್ಯ ತರಬೇತುದಾರ, ಕನಿಷ್ಠ 3 ವರ್ಷಗಳ ಅವಧಿಗೆ; ಅಥವಾ ಬಿಸಿಸಿಐ ಲೆವೆಲ್ 3 ಸರ್ಟಿಫಿಕೇಶನ್ ಅಥವಾ ತತ್ಸಮಾನ ಹೊಂದಿರಬೇಕು. ನೇಮಕದ ಸಮಯದಲ್ಲಿ ಅಭ್ಯರ್ಥಿಯು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.’

ಬಿಸಿಸಿಐ ನೇಮಿಸಿದ ಹೊಸ ಸಿಬ್ಬಂದಿ ನವೆಂಬರ್ʼನಲ್ಲಿ ನಡೆಯಲಿರುವ ನ್ಯೂಜಿಲ್ಯಾಂಡ್ ವಿರುದ್ಧದ ಟೀಮ್ ಇಂಡಿಯಾದ ತವರು ಸರಣಿಗಾಗಿ ತಮ್ಮ ಅಧಿಕಾರಾವಧಿಯನ್ನು ಪ್ರಾರಂಭಿಸಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು