News Karnataka Kannada
Saturday, May 11 2024
ಕ್ರೀಡೆ

ಟಿ-20 ಮಹಿಳಾ ವಿಶ್ವಕಪ್: ಭಾರತ ತಂಡಕ್ಕೆ ಹರ್ಮನ್ ಪ್ರೀತ್ ಸಾರಥ್ಯ

Photo Credit :

ಟಿ-20 ಮಹಿಳಾ ವಿಶ್ವಕಪ್: ಭಾರತ ತಂಡಕ್ಕೆ ಹರ್ಮನ್ ಪ್ರೀತ್ ಸಾರಥ್ಯ

ಮುಂಬಯಿ: ನವಂಬರ್ ನಲ್ಲಿ ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ಮಹಿಳೆಯರ ಟಿ-20 ವಿಶ್ವಕಪ್ ನಲ್ಲಿ ಹರ್ಮನ್ ಪ್ರೀತ್ ಕೌರ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಅಖಿಲ ಭಾರತ ಮಹಿಳಾ ಆಯ್ಕೆ ಸಮಿತಿಯು ಶುಕ್ರವಾದ ತಂಡವನ್ನು ಆಯ್ಕೆ ಮಾಡಿದೆ. ವೆಸ್ಟ್ ಇಂಡೀಸ್ ನಲ್ಲಿ ನ.9ರಿಂದ 24ರ ತನಕ ಟೂರ್ನಮೆಂಟ್ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಹರ್ಮನ್ ಪ್ರೀತ್ ಅವರನ್ನು ಹೊರತುಪಡಿಸಿ ತಂಡದಲ್ಲಿ ಹಿರಿಯ ಆಟಗಾರ್ತಿ ಮಿಥಾಲಿ ರಾಝ್ ಮತ್ತು ಸ್ಮೃತಿ ಮಂದಾನ ಅವರಿದ್ದಾರೆ.

ವಿಶ್ವಕಪ್ ನಲ್ಲಿ ಭಾರತ ತಂಡವು ಬಿ ವಿಭಾಗದಲ್ಲಿದ್ದು, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಐರ್ಲೆಂಡ್ ವಿರುದ್ಧ ಆಡಲಿದೆ. ಈ ಟೂರ್ನಿಯು ನ.9ರಂದು ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯದೊಂದಿಗೆ ಆರಂಭವಾಗಲಿದೆ.

ತಂಡ: ಹರ್ಮನ್ ಪ್ರೀತ್ ಕೌರ್(ನಾಯಕಿ), ಸ್ಮೃತಿ ಮಂದಾನ(ಉಪನಾಯಕಿ), ಮಿಥಾಲಿ ರಾಜ್, ಜೆಮಿಮ್ಹ ರೋಡ್ರಿಗಸ್, ವೇದಾ ಕೃಷ್ಣಮೂರ್ತಿ, ದೀಪ್ತಿ ಶರ್ಮಾ, ತನ್ಯಾ ಭಾಟಿಯಾ(ವಿ.ಕೀ), ಪೂನಂ ಯಾದವ್, ರಾಧಾ ಯಾದವ್, ಅನುಜಾ ಪಾಟೀಲ್, ಏಕ್ತಾ ಬಿಸ್ತಾ, ಹೇಮಲತಾ, ಮಾನ್ಸಿ ಜೋಶಿ, ಪೂಜಾ ವಸ್ತ್ರಾಕರ್, ಆರುಂಧತಿ ರೆಡ್ಡಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು