News Karnataka Kannada
Monday, April 29 2024
ಕ್ರೀಡೆ

ಟಿ 20 ಪ್ಲೇಯರ್ ರ‍್ಯಾಂಕಿಂಗ್ಸ್: 18 ನೇ ಸ್ಥಾನಕ್ಕೆ ಜಿಗಿದ ಶ್ರೇಯಸ್ ಅಯ್ಯರ್

Shreyas Iyer
Photo Credit :

ನವದೆಹಲಿ : ಐಸಿಸಿ ಪುರುಷರ ಟಿ 20 ಪ್ಲೇಯರ್ ರ‍್ಯಾಂಕಿಂಗ್ಸ್ ಇತ್ತೀಚಿನ ಪ್ರಕಟಣೆಯಲ್ಲಿ ಭಾರತದ ಬ್ಯಾಟ್ಸ್ ಮ್ಯಾನ್ ಶ್ರೇಯಸ್ ಅಯ್ಯರ್ 27 ಸ್ಥಾನಗಳನ್ನು ಜಿಗಿದು 18 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಶ್ರೀಲಂಕಾ ವಿರುದ್ಧದ ಭಾರತದ ಇತ್ತೀಚಿನ ಸರಣಿಯ ತವರಿನಲ್ಲಿ ಗೆಲುವು ಐಸಿಸಿ ಪುರುಷರ ಟಿ 20 ಆಟಗಾರರ ಶ್ರೇಯಾಂಕದಲ್ಲಿ ಪ್ರಮುಖ ಪರಿಣಾಮಗಳನ್ನು ಬೀರಿದೆ. ಆಕ್ರಮಣಕಾರಿ ಅಗ್ರ ಕ್ರಮಾಂಕದ ಬ್ಯಾಟ್ಸ್ ಮ್ಯಾನ್ ಶ್ರೇಯಸ್ ಅಯ್ಯರ್ ಉತ್ತಮ ಸ್ಥಾನ ಗಳಿಸಲು ಸಹಾಯ ಮಾಡಿದೆ.

ಶ್ರೀಲಂಕಾ ವಿರುದ್ಧ ಭಾರತ 3-0 ಗೆಲುವಿನಲ್ಲಿ ಅಯ್ಯರ್ ಮೂರು ಅಜೇಯ ಅರ್ಧಶತಕಗಳನ್ನು ಗಳಿಸಿ ಪ್ರಮುಖ ಪಾತ್ರ ವಹಿಸಿದರು, 27 ವರ್ಷದ ಆಟಗಾರ ಪ್ರಭಾವಶಾಲಿ 174 ಸ್ಟ್ರೈಕ್ ರೇಟ್‌ನಲ್ಲಿ 204 ರನ್‌ಗಳನ್ನು ಗಳಿಸಿದ್ದರು. ಅವರ ಅಮೋಘ ಆಟ 27 ಸ್ಥಾನಗಳನ್ನು ಜಿಗಿಯಲು ಸಹಾಯ ಮಾಡಿದೆ.

ಸರಣಿಗಾಗಿ ವಿಶ್ರಾಂತಿ ಪಡೆದಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿ ಐದು ಸ್ಥಾನ ಕುಸಿದು 15 ನೇ ಸ್ಥಾನಕ್ಕೆ ತಲುಪಿದ್ದಾರೆ. ಕೆಎಲ್ ರಾಹುಲ್ 10ನೇ ಸ್ಥಾನಕ್ಕೆ ಕುಸಿದಿದ್ದಾರೆ. ಭುವನೇಶ್ವರ್ ಕುಮಾರ್ ಬೌಲರ್ ಶ್ರೇಯಾಂಕದಲ್ಲಿ ಮೂರು ಸ್ಥಾನಗಳನ್ನು ಮೇಲಕ್ಕೇರಿ 17 ನೇ ಸ್ಥಾನಕ್ಕೆ ತಲುಪಿದ್ದಾರೆ.

ಶ್ರೀಲಂಕಾದ ಪಥುಮ್ ನಿಸ್ಸಾಂಕಾ ಸರಣಿಯ ಎರಡನೇ ಪಂದ್ಯದಲ್ಲಿ ಪ್ರಭಾವಿ 75 ರನ್ ಗಳಿಸಿದರು ಮತ್ತು ಅವರು ಶ್ರೇಯಾಂಕದಲ್ಲಿ ಆರು ಸ್ಥಾನಗಳ ಏರಿಕೆಯೊಂದಿಗೆ ಒಂಬತ್ತನೇ ಸ್ಥಾನಕ್ಕೆ ಏರಿದ್ದಾರೆ.

ಈ ವಾರದ ಟಿ 20 ಕ್ರಿಕೆಟ್‌ನ ಗಮನಾರ್ಹ ಬೆಳವಣಿಗೆಯಲ್ಲಿ ಯುಎಇಯ ಮುಹಮ್ಮದ್ ವಸೀಮ್ ಐಸಿಸಿ ಪುರುಷರ ಟಿ 20 ವಿಶ್ವಕಪ್ ಕ್ವಾಲಿಫೈಯರ್ ಎ ವಿಭಾಗದ ಫೈನಲ್‌ನಲ್ಲಿ ಐರ್ಲೆಂಡ್ ವಿರುದ್ಧ ಅಜೇಯ ಶತಕ ಸಿಡಿಸಿ 12 ನೇ ಸ್ಥಾನವನ್ನು ತಲುಪಿದ್ದಾರೆ. ಇದು ಯುಎಇ ಬ್ಯಾತ್ಸ್ ಮ್ಯಾನ್ ಒಬ್ಬನ ಅತ್ಯುನ್ನತ ಶ್ರೇಯಾಂಕವಾಗಿದೆ. 2017 ರಲ್ಲಿ ಶೈಮನ್ ಅನ್ವರ್ ಸಾಧಿಸಿದ 13 ನೇ ಸ್ಥಾನವನ್ನು ಮೀರಿಸಿದೆ.

ಭಾರತದ ಎದುರಿನ ಸರಣಿಯಲ್ಲಿ ಶ್ರೀಲಂಕಾದ ಲಹಿರು ಕುಮಾರ ಅವರು ಪಡೆದ ಐದು ವಿಕೆಟ್‌ಗಳು ಅವರನ್ನು ಮೊದಲ ಬಾರಿಗೆ ಟಾಪ್ 40 ಬೌಲರ್‌ಗಳ ಯಾದಿಯಲ್ಲಿ ಕಾಣಿಸುವಂತೆ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು