News Karnataka Kannada
Monday, April 29 2024
ಕ್ರೀಡೆ

ಚೊಚ್ಚಲ ಬಾರಿಗೆ ಪ್ರೊ ಕಬಡ್ಡಿ ಲೀಗ್ ಪ್ರಶಸ್ತಿ ಗೆದ್ದ ದಬಾಂಗ್ ಡೆಲ್ಲಿ

Delhi Dabangs
Photo Credit : News Kannada
ಪ್ರೊ ಕಬಡ್ಡಿ ಲೀಗ್ ರೋಚಕ ಫೈನಲ್​ನಲ್ಲಿ ಕೇವಲ 1 ಅಂಕದ ಅಂತರದಲ್ಲಿ ಪಟ್ನಾ ಪೈರೇಟ್ಸ್ ತಂಡಕ್ಕೆ ಸೋಲಿನ ರುಚಿ ತೋರಿಸುವ ಮೂಲಕ ದಬಾಂಗ್ ಡೆಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿದೆ.
ಈ ಮೂಲಕ 2 ತಿಂಗಳಿಗೂ ಹೆಚ್ಚು ಕಾಲ 137 ಪಂದ್ಯಗಳಲ್ಲಿ ಸೆಣಸಾಡಿದ 12 ತಂಡಗಳ ನಡುವಿನ ಕಾದಾಟಕ್ಕೆ ತೆರೆಬಿದ್ದಿದೆ.

ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್  ಫೈನಲ್ ಪಂದ್ಯದ ರಣ ರೋಚಕ ಹಣಾಹಣಿಯಲ್ಲಿ 3 ಬಾರಿಯ ಚಾಂಪಿಯನ್ ಕನ್ನಡಿಗ ಪ್ರಶಾಂತ್ ಕುಮಾರ್ ರೈ ಸಾರಥ್ಯದ ಪಟ್ನಾ ಪೈರೇಟ್ಸ್  ತಂಡವನ್ನು ಮಣಿಸಿದ ದಬಂಗ್ ಡೆಲ್ಲಿ ತಂಡ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು. ವೈಟ್‌ಫೀಲ್ಡ್‌ನಲ್ಲಿರುವ ಹೋಟೆಲ್ ಶೆರಟನ್ ಗ್ರ್ಯಾಂಡ್‍ನಲ್ಲಿ ಶುಕ್ರವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಡೆಲ್ಲಿ 37-36ರಲ್ಲಿ ಜಯ ಗಳಿಸಿತು. ರೋಚಕ ಪಂದ್ಯದಲ್ಲಿ ಕೇವಲ 1 ಅಂಕದ ಅಂತರದಲ್ಲಿ ಪಟ್ನಾ ಪೈರೇಟ್ಸ್ ತಂಡಕ್ಕೆ ಸೋಲಿನ ರುಚಿ ತೋರಿಸುವ ಮೂಲಕ ಮೊದಲ ಬಾರಿಗೆ ಚಾಂಪಿಯನ್ ಆಗಿದೆ. ಈ ಮೂಲಕ 2 ತಿಂಗಳಿಗೂ ಹೆಚ್ಚು ಕಾಲ 137 ಪಂದ್ಯಗಳಲ್ಲಿ ಸೆಣಸಾಡಿದ 12 ತಂಡಗಳ ನಡುವಿನ ಕಾದಾಟಕ್ಕೆ ತೆರೆಬಿದ್ದಿದೆ.

ಉಭಯ ತಂಡಗಳು ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದವು. ಟ್ಯಾಕ್ಲಿಂಗ್ ಮಾಡಿ ಅಪಾಯಕ್ಕೆ ಸಿಲುಕಲು ಮುಂದಾಗದ ತಂಡಗಳು ರೇಡಿಂಗ್ ಮೂಲಕವೇ ಪಾಯಿಂಟ್‍ಗಳನ್ನು ಗಳಿಸುತ್ತ ಸಾಗಿದವು. ಡೆಲ್ಲಿ ಪರವಾಗಿ ಎಕ್ಸ್‌ಪ್ರೆಸ್ ಖ್ಯಾತಿಯ ನವೀನ್ ಪದೇ ಪದೇ ಎದುರಾಳಿ ಪಾಳಯಕ್ಕೆ ನುಗ್ಗಿ ಪಾಯಿಂಟ್‍ಗಳೊಂದಿಗೆ ವಾಪಸಾದರು. ಪಟ್ನಾ ತಂಡವು ಸಚಿನ್, ಗುಮಾನ್ ಸಿಂಗ್ ಮತ್ತು ಪ್ರಶಾಂತ್ ರೈ ಮೂಲಕ ಪಾಯಿಂಟ್‍ಗಳನ್ನು ಗಳಿಸಿತು. ಹೀಗಾಗಿ 3-3, 4-4 ಮತ್ತು 5-5ರಲ್ಲಿ ಪಂದ್ಯ ಸಾಗಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು