News Karnataka Kannada
Wednesday, May 01 2024
ವಿದೇಶ

ಜೋಕೋವಿಕ್ ಗೆ ಸೋಲು‌ ಡೆನಿಲ್ ಯು ಎಸ್ ಓಪನ್ ಕಿರೀಟ

Jocovik
Photo Credit :

ನ್ಯೂಯಾರ್ಕ್‌: ರಷ್ಯಾದ ಡೆನಿಲ್‌ ಮೆಡ್ವೆಡೆವ್‌ ಅವರು ಇಲ್ಲಿ ನಡೆಯುತ್ತಿರುವ ಯುಎಸ್‌ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಫೈನಲ್‌ ಹಣಾಹಣಿಯಲ್ಲಿ ವಿಶ್ವದ ನಂ.1 ಆಟಗಾರ ನೊವಾಕ್‌ ಜೊಕೊವಿಕ್‌ ಅವರನ್ನು ಮಣಿಸುವ ಮೂಲಕ ವೃತ್ತಿ ಜೀವನದ ಮೊದಲ ಗ್ರ್ಯಾನ್‌ ಸ್ಲಾಮ್‌ ಮುಡಿಗೇರಿಸಿಕೊಂಡಿದ್ದಾರೆ.ತಮ್ಮ ವೃತ್ತಿ ಜೀವನದ 20 ಗ್ರ್ಯಾನ್‌ ಸ್ಲಾಮ್ ಗೆದ್ದಿರುವ ನೊವಾಕ್‌ ಜೊಕೊವಿಕ್‌ ಅವರು ಯುಎಸ್‌ ಓಪನ್‌ ಫೈನಲ್‌ನಲ್ಲಿ ಡೆನಿಲ್‌ ಮೆಡ್ವೆಡೆವ್ ವಿರುದ್ಧ ಗೆದ್ದು ಪ್ರಸಕ್ತ ಕ್ಯಾಲೆಂಡರ್‌ನ ಸ್ಲ್ಯಾನ್‌ ಗೆಲ್ಲುವ ಕನಸು ಕಂಡಿದ್ದರು. ಆದರೆ, ಇದಕ್ಕೆ ವಿಶ್ವದ ನಂ.2ನೇ ಆಟಗಾರ ಅವಕಾಶ ಮಾಡಿಕೊಳ್ಳಲಿಲ್ಲ. ಅಷ್ಟೇ ಅಲ್ಲದೆ, ತಮ್ಮ ನೆಚ್ಚಿನ ಆಟಗಾರ ಜೊಕೊವಿಕ್‌ ಅವರ ದಾಖಲೆಯ ಗ್ರ್ಯಾನ್‌ ಸ್ಲಾಮ್‌ ಗೆಲುವನ್ನು ಕಣ್ತುಂಬಿಸಿಕೊಳ್ಳಲು ಎದುರು ನೋಡುತ್ತಿದ್ದ ಸಾವಿರಾರು ಅಭಿಮಾನಿಗಳಿಗೆ ರಷ್ಯಾ ಆಟಗಾರ ನಿರಾಶೆ ಮೂಡಿಸಿದರು.
ಇಲ್ಲಿನ ಅರ್ಥರ್‌ ಆಶ್‌ ಸ್ಟೇಡಿಯಂನಲ್ಲಿ ಸಾವಿರಾರು ಟನಿಸ್‌ ಅಭಿಮಾನಿಗಳ ಸಮ್ಮುಖದಲ್ಲಿ ವೃತ್ತಿ ಬದುಕಿನ ಶ್ರೇಷ್ಠ ಪ್ರದರ್ಶನ ತೋರಿದ ಮೆಡ್ವೆಡೆವ್‌ ಅವರು 6-4, 6-4 ಹಾಗೂ 6-4 ನೇರ ಸೆಟ್‌ಗಳಲ್ಲಿ ಸರ್ಬಿಯಾದ ನೊವಾಕ್‌ ಜೊಕೊವಿಕ್‌ ಅವರನ್ನು ಮಣಿಸಿದರು. ಆ ಮೂಲಕ ಪ್ರಸಕ್ತ ಕ್ಯಾಲೆಂಡರ್‌ ಗ್ರ್ಯಾನ್‌ ಸ್ಲಾಮ್‌ ಗೆಲ್ಲುವ ಜೊಕೊವಿಕ್ ಕನಸನ್ನು ಭಗ್ನಗೊಳಿಸಿದರು.

ಇದಕ್ಕೂ ಮುನ್ನ ನೊವಾಕ್‌ ಜೊಕೊವಿಕ್‌ ಸೆಮಿಫೈನಲ್‌ ಹಣಾಹಣಿಯಲ್ಲಿ ಅಲೆಗ್ಸಾಂಡರ್‌ ಜ್ವೆರೆವ್‌ ವಿರುದ್ಧ 4-2, 6-2, 6-4, 4-6, 6-2 ಅಂತರದಲ್ಲಿ ಗೆದ್ದು ಫೈನಲ್‌ ಪ್ರವೇಶ ಮಾಡಿದ್ದರು. ಮತ್ತೊಂದೆಡೆ ಡೆನಿಲ್‌ ಮೆಡ್ವೆಡೆವ್‌ ಅವರು ಕಳೆದ ಶುಕ್ರವಾರ ನಡೆದಿದ್ದ ಸೆಮಿಫೈನಲ್‌ ಹಣಾಹಣಿಯಲ್ಲಿ ಫೆಲಿಕ್ಸ್ ಯುಗರ್‌ ವಿರುದ್ಧ 6-4, 7-5, 6-2 ಅಂತರದಲ್ಲಿ ಜಯ ಸಾಧಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು