ದುಬೈ: ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಚೆಂಡು ವಿರೂಪಗೊಳಿಸಲು ಯತ್ನಿಸಿದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮಿತ್ ಗೆ ಒಂದು ಪಂದ್ಯವನ್ನು ನಿಷೇಧಿಸಿದೆ.
ಅದಲ್ಲದೆ ಚೆಂಡು ವಿರೂಪಗೊಳಿಸಿದ ಕ್ಯಾಮರಾನ್ ಬ್ಯಾಂಕ್ರಫ್ಟ್ ಅವರಿಗೆ ದಂಡ ವಿಧಿಸಲಾಗಿದೆ.
ಶನಿವಾರ ಮೂರನೇ ದಿನವಾದ ನ್ಯೂಲ್ಯಾಂಡ್ಸ್ನಲ್ಲಿ ನಡೆದ ಬ್ಯಾಟ್ಸ್ಮನ್ ಬ್ಯಾಂಕ್ರಾಫ್ಟ್ ಹರಿತವಾದ ಸಾಧನದಿಂದ ಚೆಂಡನ್ನು ಕೆರೆದು ವಿರೂಪ ಗೊಳಿಸಲು ಯತ್ನಿಸಿದ್ದರು. ಈ ಎಲ್ಲ ದೃಶ್ಯಾವಳಿಗಳು ಟಿವಿಯಲ್ಲಿ ಸೆರೆಯಾಗಿತ್ತು. ಆಟದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ಸ್ಟೀವ್ ಸ್ಮಿತ್, ಚೆಂಡು ವಿರೂಪಗೊಳಿಸಲು ಬೆಂಬಲ ನೀಡಿದ್ದನ್ನು ಒಪ್ಪಿಕೊಂಡಿದ್ದರು.