ಲಾರ್ಡ್ಸ್ : ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆAಡ್ ಎರಡನೇ ಟೆಸ್ಟ್ ಪಂದ್ಯದ 3 ನೇ ದಿನ ಲಾರ್ಡ್ಸ್ ಬಾಲ್ಕನಿಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನಾಗಿನ್ ಡ್ಯಾನ್ಸ್ ಮಾಡಿದ್ದಾರೆ. ಕೊಹ್ಲಿ ಡ್ಯಾನ್ಸ್ ವೈರಲ್ ಆಗಿದ್ದು, ನೆಟ್ಟಿಗರಯ ಮಿಮ್ಸ್, ಟ್ರೋಲ್ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ಪಕ್ಕದಲ್ಲೇ ಇದ್ದ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಮತ್ತು ಮೊಹಮ್ಮದ್ ಸಿರಾಜ್ ನಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. 2002 ರಲ್ಲಿ ಇಂಗ್ಲೆAಡ್ ವಿರುದ್ಧ ನ್ಯಾಟ್ವೆಸ್ಟ್ ಟ್ರೋಫಿ ಫೈನಲ್ ಗೆದ್ದ ನಂತರ ಲಾರ್ಡ್ಸ್ ಬಾಲ್ಕನಿಯಲ್ಲಿ ಮಾಜಿ ನಾಯಕ ಸೌರವ್ ಗಂಗೂಲಿ ಶರ್ಟ್ ಬಿಚ್ಚಿ ಸುತ್ತಿ ಬಿಸಾಡಿದ್ದರು. ಇಂದಿನ ಕೊಹ್ಲಿ ಡ್ಯಾನ್ಸ್ 2002ರ ಘಟನೆಯನ್ನು ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೆ ನೆನಪಿಸಿದೆ.