News Karnataka Kannada
Thursday, May 02 2024
ಕ್ರೀಡೆ

ಕೆಕೆಆರ್ ಮಣಿಸಿದ ಚೆನ್ನೈ 4ನೇ ಬಾರಿಗೆ ಚಾಂಪಿಯನ್

New Project 2021 10 16t075246.516
Photo Credit :

ದುಬೈ: ಐಪಿಎಲ್ 14ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 27 ರನ್ ಜಯಗಳಿಸಿದ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿದೆ. ಚೆನ್ನೈ ತಂಡ ನಾಲ್ಕನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿದ್ದು, ಕೆಕೆಆರ್ ಗೆ ಮೂರನೇ ಪ್ರಶಸ್ತಿಯ ಕನಸು ಭಗ್ನವಾಗಿದೆ.

2010, 2011, 2018 ಮತ್ತು 2021ರಲ್ಲಿ ಚೆನ್ನೈ ತಂಡ ಐಪಿಎಲ್ ಚಾಂಪಿಯನ್ ಆಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ 20 ಓವರುಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತ್ತು. ಗಾಯಕವಾಡ್ 32, ಡುಪ್ಲೆಸಿಸ್ 86, ರಾಬಿನ್ ಉತ್ತಪ್ಪ 31, ಮೋಹಿನ್ 37 ರನ್ ಗಳಿಸಿದರು.

ಗೆಲುವಿನ ಗುರಿ ಬೆನ್ನತ್ತಿದ ಕೊಲ್ಕತ್ತಾ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್ ಗಳಿಸಲಷ್ಟೇ ಶಕ್ತವಾಯಿತು. ಚಾಂಪಿಯನ್ ಆದ ಚೆನ್ನೈ ತಂಡಕ್ಕೆ 20 ಕೋಟಿ ರೂ. ಹಾಗೂ ರನ್ನರ್-ಅಪ್ ಕೆಕೆಆರ್ 12.5 ಕೋಟಿ ಪ್ರಶಸ್ತಿ ಮೊತ್ತ ದೊರೆಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು