ಲಂಡನ್: ಓವಲ್ ನಲ್ಲಿ ಭಾರತ ವಿರುದ್ಧ ನಡೆಯಲಿರುವ ಐದನೇ ಟೆಸ್ಟ್ ಪಂದ್ಯವು ತನ್ನ ಅಂತಾರಾಷ್ಟ್ರೀಯ ಕ್ರಿಕೆಟಿನ ಕೊನೆಯ ಪಂದ್ಯವಾಗಲಿದೆ ಎಂದು ಇಂಗ್ಲೆಂಡಿನ ಆರಂಭಿಕ ಆಟಗಾರ ಅಲಿಸ್ಟರ್ ಕುಕ್ ಘೋಷಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಫಾರ್ಮ್ ಕಳಕೊಂಡಿರುವ ಕುಕ್ ಇದುವರೆಗೆ 160 ಟೆಸ್ಟ್ ಗಳಲ್ಲಿ 12,254 ರನ್ ಗಳಿಸಿದ್ದಾರೆ. ಇದರಲ್ಲಿ 32 ಶತಕ ಮತ್ತು 56 ಅರ್ಧಶತಕವಿದೆ. 92 ಏಕದಿನ ಪಂದ್ಯಗಳನ್ನು ಆಡಿರುವ ಅವರು 3,204 ರನ್ ಬಾರಿಸಿದ್ದಾರೆ. ಇದರಲ್ಲಿ ಐದು ಶತಕ ಮತ್ತು 19 ಅರ್ಧಶತಕ ಸೇರಿದೆ.