News Karnataka Kannada
Saturday, May 11 2024
ಕ್ರೀಡೆ

ಏಶ್ಯಾ ಕಪ್ ಮುಡಿಗೇರಿಸಿಕೊಂಡ ಭಾರತದ ಮಹಿಳಾ ಹಾಕಿ ತಂಡ

Photo Credit :

ಏಶ್ಯಾ ಕಪ್ ಮುಡಿಗೇರಿಸಿಕೊಂಡ ಭಾರತದ ಮಹಿಳಾ ಹಾಕಿ ತಂಡ

ನವದೆಹಲಿ: ಜಪಾನ್ ನ ಕಾಕಮಿಗಾರದಲ್ಲಿ ನಡೆದ ಏಶ್ಯಾ ಕಪ್ ನ ಫೈನಲ್ ಪಂದ್ಯದಲ್ಲಿ ಭಾರತದ ಮಹಿಳಾ ಹಾಕಿ ತಂಡವು ಚೀನಾವನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಚೀನಾವನ್ನು 5-4ರಿಂದ ಪರಾಭವಗೊಳಿಸಿದ ಭಾರತದ ಮಹಿಳಾ ಹಾಕಿ ತಂಡವು 2018ರಲ್ಲಿ ನಡೆಯಲಿರುವ ವಿಶ್ವಕಪ್ ಗೆ ಪ್ರವೇಶ ಪಡೆದುಕೊಂಡಿದೆ.

ನಿಗದಿತ ಸಮಯದಲ್ಲಿ ಎರಡು ತಂಡಗಳು 1-1ರ ಸಮಬಲದಲ್ಲಿದ್ದ ಕಾರಣ ಪೆನಾಲ್ಟಿ ಶೂಟೌಟ್ ನಲ್ಲಿ ಫಲಿತಾಂಶ ನಿರ್ಧರಿಸಬೇಕಾಗಿ ಬಂತು. ಇದರಲ್ಲಿ ಭಾರತ ಐದು ಗೋಲುಗಳನ್ನು ಸಿಡಿಸಿದರೆ, ಚೀನಾ ಕೇವಲ ನಾಲ್ಕು ಗೋಲು ಬಾರಿಸಿ ಸೋಲೊಪ್ಪಿಕೊಂಡಿತು.

ಭಾರತದ ಪುರುಷರ ಹಾಕಿ ತಂಡವು ಏಶ್ಯಾ ಕಪ್ ಗೆದ್ದಿರುವುದರಿಂದ ಭಾರತಕ್ಕೆ ಸಂಭ್ರಮವು ಎರಡು ಪಟ್ಟಾಗಿದೆ. ಇಷ್ಟು ಮಾತ್ರವಲ್ಲದೆ ಸುಮಾರು 13 ವರ್ಷಗಳ ಬಳಿಕ ಏಶ್ಯಾ ಕಪ್ ನ್ನು ಮಹಿಳಾ ತಂಡವು ಗೆದ್ದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು