ವಿಶಾಖಪಟ್ಟಣಂ: ಡೀನ್ ಎಲ್ಗರ್ (160) ಮತ್ತು ಕ್ವಿಂಟನ್ ಡಿ ಕಾಕ್ (111) ಶತಕದ ಹೊರತಾಗಿಯೂ ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ನ ಮೂರನೇ ದಿನದಾಟದಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 385 ರನ್ ಮಾಡಿದೆ.
ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐದು ವಿಕೆಟ್ ಉರುಳಿಸಿ ಎದುರಾಳಿ ಪಾಳಯಕ್ಕೆ ಆಘಾತವಿಕ್ಕಿದರು.
ಮೂರನೇ ದಿನದ ಅಂತ್ಯಕ್ಕೆ ಸೆನುರಾನ ಮುತ್ತುಸ್ವಾಮಿ(12) ಮತ್ತು ಕೇಶವ್ ಮಹಾರಾಜ್(3) ಕ್ರೀಸಿನಲ್ಲಿದ್ದರು.
ಮೂರನೇ ದಿನದ ಅಂತ್ಯಕ್ಕೆ ಮೊದಲು ಅಶ್ವಿನ್ ಶತಕವೀರ ಡಿ ಕಾಕ್ ಮತ್ತು ವೆರ್ನನ್ ಫಿಲಂಡರ್ ವಿಕೆಟ್ ಕೂಡ ಉರುಳಿಸಿ ಪ್ರವಾಸಿ ಪಾಳಯಕ್ಕೆ ಆಘಾತವಿಕ್ಕಿದರು.
ಇದಕ್ಕೆ ಮೊದಲು ಡೀನ್ ಎಲ್ಗರ್ ವಿಕೆಟ್ ಉರುಳಿಸಿದ ಅಶ್ವಿನ್, ಡಿಕಾಕ್ ಮತ್ತು ಎಲ್ಗರ್ ಜತೆಯಾಟವನ್ನು ಮುರಿದರು.