ಶಿವಮೊಗ್ಗ : ಬಿ.ಹೆಚ್. ರಸ್ತೆಯ ಉಷಾ ನರ್ಸಿಂಗ್ ಹೋಮ್ ಬಳಿ ಸಂಭವಿಸಿದ ರಸ್ತೆ ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವೇಗವಾಗಿ ಬಂದ ಮಾರುತಿ ಬ್ರೀಝಾ ಕಾರು ಅಂಬ್ಯೂಲೆನ್ಸ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ, ಬ್ರೀಝಾ ಕಾರು ರಸ್ತೆಯಲ್ಲೇ ಪಲ್ಟಿ ಹೊಡೆದಿದೆ.
ಅಂಬ್ಯೂಲೆನ್ಸ್‌ಗೆ ಹಾನಿಯಾಗಿದ್ದರೂ, ಕಾರು ನಿಯಂತ್ರಣ ತಪ್ಪಿ ಪಲ್ಟಿಯಾದ ರೀತಿ ಭಯಾನಕವಾಗಿತ್ತು. ಸ್ಥಳೀಯರು ತಕ್ಷಣವೇ ಧಾವಿಸಿ ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಗರ ಪ್ರದೇಶದಲ್ಲಿ ಅತೀ ವೇಗದ ಚಾಲನೆಗೆ ಈ ಅಪಘಾತ ಕನ್ನಡಿ ಹಿಡಿದಿದೆ.

