ಉಡುಪಿ: ಇಂದ್ರಾಳಿ ರೈಲ್ವೆ ನಿಲ್ದಾಣದ ಆಟೋ ಸ್ಟ್ಯಾಂಡ್ ಹತ್ತಿರ ಬೃಹತ್ ಗಾತ್ರದ ಹೆಬ್ಬಾವೊಂದನ್ನು ರಕ್ಷಿಸಲಾಗಿದೆ. ರೈಲ್ವೆ ಪ್ರಯಾಣಿಕರ ಸಂಚಾರ ಇರುವ ಸ್ಥಳದಲ್ಲಿ ಹೆಬ್ಬಾವಿನ ಚಲನವಲನವನ್ನು ಗಮನಿಸಿದ ಆಟೋ ಚಾಲಕ ಪ್ರಶಾಂತ್ ಅವರು‌ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದರು.

ತಕ್ಷಣ ಸ್ಪಂದಿಸಿದ ಒಳಕಾಡುವರು ಹಾವು ಹಿಡಿಯುವ ಪರಿಣಿತಿ ಹೊಂದಿರುವ ಅಟೋಚಾಲಕ ಬಶೀರ್ ಎನ್ನುವರನ್ನು ಸ್ಥಳಕ್ಕೆ ಕರಿಸಿಕೊಂಡು, ಹೆಬ್ಬಾವಿನ ರಕ್ಷಣಾ ಕಾರ್ಯಾಚರಣೆ ನಡೆಸಿದರು.‌

ಹೆಬ್ಬಾವು ರಸ್ತೆ ದಾಟುವ ಸಂದರ್ಭದಲ್ಲಿ ಮೈಮೇಲೆ ದ್ವಿಚಕ್ರ ವಾಹನ ಚಲಿಸಿದ ಪರಿಣಾಮ ಗಾಯಗೊಂಡಿದೆ. ಹೆಬ್ಬಾವಿಗೆ ಚಿಕಿತ್ಸೆಗೆ ಒಳಪಡಿಸಿ, ಬಳಿಕ ಸುರಕ್ಷಿತ ಸ್ಥಳದಲ್ಲಿ ಬಿಡಲಾಯಿತು.