News Karnataka Kannada
Monday, May 06 2024
ಸಂಪಾದಕರ ಆಯ್ಕೆ

ಹೊಸ ಮಸೂದೆ ಹೊಡೆತ: ಯುಕೆ ತೊರೆಯುವ ಚಿಂತನೆಯಲ್ಲಿ ವಾಟ್ಸಪ್‌

WhatsApp plans to leave UK
Photo Credit : By Author

ಲಂಡನ್: ಆನ್‌ಲೈನ್ ಸುರಕ್ಷತಾ ಮಸೂದೆಯ ಅಡಿಯಲ್ಲಿ ಬಳಕೆದಾರರಿಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಸೌಲಭ್ಯವನ್ನು ದುರ್ಬಲಗೊಳಿಸಲು ಒತ್ತಾಯಿಸಿದರೆ ಯುಕೆ ಮಾರುಕಟ್ಟೆಯನ್ನು ತೊರೆಯುವುದಾಗಿ ಮೆಟಾ ಒಡೆತನದ ವಾಟ್ಸಾಪ್ ಹೇಳಿದೆ.

ವಾಟ್ಸಾಪ್ ಹೆಡ್ ವಿಲ್ ಕ್ಯಾತ್‌ಕಾರ್ಟ್ ಮಾತನಾಡಿ “ಇತ್ತೀಚೆಗೆ ಇರಾನ್‌ನಲ್ಲಿ ನಮ್ಮನ್ನು ನಿರ್ಬಂಧಿಸಲಾಗಿದೆ, ಆದರೆ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಇಂತಹ ಕ್ರಮ ಕೈಗೊಳ್ಳುವುದಿಲ್ಲ ಎಂಬ ಭರವಸೆ ಇದೆ ಎಂದರು.

ನಮ್ಮ ಶೇಕಡಾ ತೊಂಬತ್ತೆಂಟು ಬಳಕೆದಾರರು ಯುಕೆಯಿಂದ ಹೊರಗಿದ್ದಾರೆ. ಶೇ. 98 ಪ್ರತಿಶತ ಬಳಕೆದಾರರ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಉತ್ಪನ್ನದ ಸುರಕ್ಷತೆಯನ್ನು ಕಡಿಮೆ ಮಾಡುವುದು ನಮಗೆ ಸರಿಕಾಣುವುದಿಲ್ಲ ಎಂದು ತಿಳಿಸಿದ್ದಾರೆ.

ಯುಕೆ ಸರ್ಕಾರ ತರಲು ಹೊರಟಿರುವ ಮಸೂದೆಯಿಂದ ವ್ಯಾಟ್ಸಾಪ್ ಮತ್ತು ಇತರ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಒದಗಿಸಲು ಬಿಲ್ ಕಷ್ಟವಾಗಬಹುದು ಎಂದು ಕ್ಯಾತ್‌ಕಾರ್ಟ್ ಹೇಳಿದರು.

ಆನ್‌ಲೈನ್ ಸುರಕ್ಷತಾ ಮಸೂದೆಯಲ್ಲಿನ ಒಂದು ನಿಬಂಧನೆಯು ಮಕ್ಕಳ ಲೈಂಗಿಕ ನಿಂದನೆ ವಸ್ತು ಅಥವಾ CSAM ಗಾಗಿ ಬಳಕೆದಾರರ ಸಂದೇಶಗಳನ್ನು ಸ್ಕ್ಯಾನ್ ಮಾಡಲು ಟೆಕ್ ಕಂಪನಿಗಳು “ಮಾನ್ಯತೆ ಪಡೆದ ತಂತ್ರಜ್ಞಾನ”ವನ್ನು ಬಳಸುವ ಅಗತ್ಯವಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು