News Karnataka Kannada
Wednesday, May 01 2024
ಸಂಪಾದಕರ ಆಯ್ಕೆ

ಸಾಮಾಜಿಕ ಜಾಲತಾಣ ಬಳಸುವಾಗ ಇರಲಿ ಎಚ್ಚರಿಕೆ

ವರ್ಕ್ ಫ್ರಂ ಹೋಂ  ಕೆಲಸದ ಹೆಸರಿನಲ್ಲಿ ಐಟಿ ಉದ್ಯೋಗಿಯೊಬ್ಬರಿಗೆ  4.33 ಲಕ್ಷ ರೂಪಾಯಿ ವಂಚನೆ ಮಾಡಿದ ಕೃತ್ಯ ಬೆಳಕಿಗೆ ಬಂದಿದೆ.
Photo Credit :

ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡುತ್ತಿರುವ ಹೆಸರು ಸೈಬರ್ ಕ್ರೈಂ ಸೆಕ್ಸ್-ಟಾರ್ಷನ್, ಇದನ್ನು ಡಿಜಿಟಲ್ ಹನಿ-ಟ್ರಾಪ್ಪಿಂಗ್ ಅಥವಾ ಆನ್ಲೈನ್ ಹನಿ-ಟ್ರಾಪಿಂಗ್ ಅಂತಾನೂ ಕರೀತಾರೆ. ಹಿಂದೆ ಕೇವಲ ಹಣ ಅಥವಾ ಸಮಾಜದಲ್ಲಿ ಘನತೆ ಅಥವಾ ಸರಕಾರಿ/ ಸೈನ್ಯದಲ್ಲಿರುವ ವ್ಯಕ್ತಿಯಿಂದ ಯಾವುದಾದರೂ ಕೆಲಸಗಳನ್ನು ಮಾಡಿಸಿಕೊಳ್ಳುವುದಕ್ಕಾಗಿ ಅಥವಾ ಸೂಕ್ಷ್ಮ ಮಾಹಿತಿ ಪಡಿಯಲು ಬಳಸಲಾಗುತ್ತಿತ್ತು. ಆದರೆ ಇದನ್ನು ಈಗ ಸೈಬರ್ ಅಪರಾಧಿಗಳು ಸಾಮಾನ್ಯ ಜನರನ್ನು ಬ್ಲಾಕ್‌ಮೇಲ್‌ ಮಾಡಿ ಹಣ ಸುಲಿಗೆ ಮಾಡಲು ತೊಡಗಿದ್ದಾರೆ.

ಇಲ್ಲಿ ಸೈಬರ್ ಅಪರಾಧಿಗಳು ಸಾಮಾಜಿಕ ಜಾಲತಾಣದ ಮಾಧ್ಯಮಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಅಥವಾಡೇಟಿಂಗ್ ಅಥವಾಮ್ಯಾಟ್ರಿಮೋನಿಯಲ್ ವೆಬ್ಸೈಟ್ಗಳನ್ನು ಬಳಸಿ ತಮ್ಮ ಬಲಿಪಶು ವ್ಯಕ್ತಿಯನ್ನು ಗುರುತಿಸಿ ಅವರೊಂದಿಗೆ ಗೆಳೆತನ ಬೆಳೆಸಿ ಅವನ ಅಶ್ಲೀಲ ವಿಡಿಯೋ ಅಥವಾ ಚಿತ್ರ ತೋರಿಸಿ ಸೆಕ್ಸ್- ಟಾರ್ಷನ್ ಮಾಡುತ್ತಾರೆ. ಅದಕ್ಕೆ ಮರ್ಯಾದೆಗೆ ಅಂಜಿದ ವ್ಯಕ್ತಿ ಕೇಳಿದಷ್ಟು ಹಣ ನೀಡುತ್ತಾನೆ.

ಸೆಕ್ಸ್-ಟಾರ್ಶನ್ ಹೇಗೆ ನಡೆಸಲಾಗುತ್ತದೆ?
1. ನಿಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್ ಹ್ಯಾಕ್ ಮಾಡಿ ನಿಮ್ಮ ಖಾಸಗಿ ಅಥವಾ ಅಶ್ಲೀಲ ಚಿತ್ರ ಅಥವಾ ವೀಡಿಯೊ ಪಡೆದು ಅಥವಾ ನಿಮ್ಮ ಚಿತ್ರವನ್ನು ಮಾರ್ಫ್ ಮಾಡಿ ನಿಮ್ಮನ್ನು ಸುಲಿಗೆ ಮಾಡುತ್ತಾರೆ.
2. ಇದು ಈಗ ತುಂಬ ಚಾಲ್ತಿಯಲ್ಲಿರುವ ವಂಚನೆ ರೀತಿ, ಮೊದಲು ಬಲಿಪಶು ವಕ್ತಿಗೆ ಗೆಳೆತನದ ಕೋರಿಕೆ ಕಳಿಸುತ್ತಾರೆ. ಆಮೇಲೆ ಮೊಬೈಲ್ ನಂಬರ್ ಬದಲಾಯಿಸಿಕೊಂಡು ಚಾಟ್ ಮಾಡಲು ಶುರು ಮಾಡುತ್ತಾರೆ. ಬಳಿಕ ಈ ಸಂಬಂಧ ವಿಡಿಯೋ ಕಾಲ್‌ ಮಾಡುತ್ತಾರೆ. ವಿಡಿಯೋ ಕಾಲ್ ರಿಸೀವ್ ಆದ ತಕ್ಷಣ ಸಂಪೂರ್ಣ ಕರೆಯನ್ನು ರೆಕಾರ್ಡ್ ಮಾಡಿಕೊಳ್ಳಲು ಆರಂಭಿಸುತ್ತಾರೆ. ಕ್ಯಾಮೆರಾದ ಮುಂದೆ ಪ್ರೀರೆಕಾರ್ಡೆಡ್ ಅಶ್ಲೀಲ ವಿಡಿಯೋ ಅಥವಾ ಮಹಿಳೆ ತನ್ನ ಬಟ್ಟೆ ಬಿಚ್ಚಿ ಅಶ್ಲೀಲವಾಗಿ ನಡತೆ ಆರಂಭಿಸುತ್ತಾರೆ . ಕಾಲ್ ಕಟ್ ಮಾಡಿದ ಬಳಿಕ ರೆಕಾರ್ಡ್ ಮಾಡಿದ ವಿಡಿಯೋ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸು ತ್ತಾರೆ. ನಮ್ಮ ಬಳಿ ನಿಮ್ಮ ಕುಟುಂಬ ಹಾಗೂ ಗೆಳೆಯರ ನಂಬರ್‌ ಮಾಹಿತಿ ಇದೆ. ಹಣ ನೀಡದಿದ್ದರೆ ವಿಡಿಯೋವನ್ನು ಎಲ್ಲರಿಗೂ ಕಳುಹಿಸು ವುದಾಗಿ ಬೆದರಿಕೆ ಹಾಕುತ್ತಾರೆ. ಪ್ರಾರಂಭದಲ್ಲಿ ಐದು ಸಾವಿರಕ್ಕಿಂತ ಕಡಿಮೆ ಮೊತ್ತ ವಿಡಿಯೋ ಡಿಲೀಟ್ ಮಾಡಲು ಕಳುಹಿಸುವಂತೆ ಡಿಮ್ಯಾಂಡ್ ಇಡುತ್ತಾರೆ. ಹಣ ವರ್ಗಾವಣೆ ಮಾಡುತ್ತಾರೆ ಎಂದು ಗೊತ್ತಾದರೆ ಮತ್ತಷ್ಟು ಹಣಕ್ಕೆ ಬೇಡಿಕೆ ಇಡುತ್ತಾರೆ.

ಈ ತಪ್ಪುಗಳನ್ನು ಮಾಡಬೇಡಿ :-

1. ಅಪರಿಚಿತರ ಗೆಳೆತನದ ಕೋರಿಕೆ ಪರಿಶೀಲಿಸದೆ ಮಾನ್ಯ ಮಾಡಬೇಡಿ.
2. ಹೊಸದಾಗಿ ಸೃಷ್ಟಿಸಿದ ಅಥವಾ ಪ್ರೊಫೈಲ್ ಲಾಕ್ ಆಗಿರುವ ಅಥವಾ ವ್ಯಕ್ತಿಗೂ ಚಿತ್ರಕ್ಕೂ ಸಂಬಂಧವಿಲ್ಲದಿದ್ದರೆ ಅಥವಾ ಅಶ್ಲೀಲ ಪ್ರೊಫೈಲ್ ಚಿತ್ರವಿದ್ದರೆ ಅಂತ ಅಪರಿಚಿತರ ಗೆಳೆತನದ ಕೋರಿಕೆ ಸ್ವೀಕರಿಸಬೇಡಿ.
3. ಅಪರಿಚಿತರೊಂದಿಗೆ ವಿಡಿಯೋ ಕಾಲ್ ಮಾಡಬೇಡಿ, ಮಾಡಿದರೂ ನಿಮ್ಮ ವಿಡಿಯೋ ಆನ್ ಮಾಡಬೇಡಿ.
4. ಯಾವುದೆ ಗೊತಿಲ್ಲದೆ ಬಂದ sms ಮೆಸೇಜ್ನಲ್ಲಿರುವ ಹೈಪೆರ್ ಲಿಂಕನ್ನು ಅಥವಾ ಇಮೇಲ್ ತೆರೆಯಬೇಡಿ.
5. ನಿಮ್ಮ ಕಂಪ್ಯೂಟರ್ ಹಾಗೂ ಸ್ಮಾರ್ಟ್ಫೋನಿನಲ್ಲಿರುವ ಖಾಸಗಿ ಮಹಿತಿ, ಕಡತ ಅಥವಾ ಚಿತ್ರ ಅಥವಾ ವಿಡಿಯೋವನ್ನು ಪಾಸ್ವರ್ಡ್ನಿಂದ ಸಂರಕ್ಷಿಸಿ.

ಭಯ ಪಡಬೇಡಿ, ಹೀಗೆ ಮಾಡಿ :-
ಸೆಕ್ಸ್ ಟಾರ್ಶನ್ ಮೊದಲ ಬೆದರಿಕೆಯನ್ನು ನಿಮ್ಮ ನಂಬಿಕೆಗೆ ಪಾತ್ರರಾದವರೊಂದಿಗೆ ಅಥವಾ ಪೋಲೀಸರೊಂದಿಗೆ ಚರ್ಚಿಸಿ,  ಬೆದರಿಕೆಗೆ ಮತ್ತು ಅವರ ಕರೆಗೆ ಸ್ಪಂದಿಸಬೇಡಿ ಅಥವಾ ಮೆಸೇಜ್ ತೆರೆಯಬೇಡಿ ಮತ್ತು ಯಾವುದೇ ಕಾರಣಕ್ಕೂ ಹಣವನ್ನು ಕೊಡಬೇಡಿ. ಸೆಕ್ಸ್ಟಾರ್ಶನ್ ಮಾಡುವ ಸೈಬರ್ ಅಪರಾಧಿಗಳು ಸುಲಭವಾಗಿ ಸಿಗುವ ಹಣದ ಬಗ್ಗೆ ಹಾಗೂ ಸುಲಭವಾಗಿ ಹೆದರುವ ಬಲಿಪಶುಗಳಿಗಾಗಿ ಹುಡುಕುತ್ತಿರುತ್ತಾರೆ, ಯಾವಾಗ ನೀವು ಸ್ಪಂದಿಸುವುದಿಲ್ಲವೋ ಅವಾಗ ಹೆದರಿಸಲು ನಾನಾ ಮಾರ್ಗದಲ್ಲಿ ಪ್ರಯತ್ನಿಸುತ್ತಾರೆ, ಯಾವಾಗ ನೀವು ಅದಕ್ಕೂ ಸ್ಪಂದಿಸುವುದಿಲ್ಲವೋ ಅವಾಗ ನಿಮ್ಮನ್ನು ಬಿಟ್ಟು ಬೇರೊಬ್ಬ ಬಲಿಪಶು ಹಿಂಜರಿಯುತ್ತಾರೆ. ಪ್ರಕರಣಕ್ಕೆ ಸಂಬಂಧಪಟ್ಟ ನಿಮ್ಮ ಸೋಶಿಯಲ್ ಮೀಡಿಯಾ ಅಥವಾ ಯಾವುದೇ ಅಕೌಂಟ್ ಅಥವಾ ಮೆಸೇಜುಗಳನ್ನು ಅಳಿಸಬೇಡಿ, ಅದು ನಿಮಗೆ ಅಪರಾದಿಯನ್ನು ಶಿಕ್ಷಿಸಲು ಬೇಕಾಗಿರುವ ಸಾಕ್ಷಿ ಅಥವಾ ಪುರಾವೆಯಾಗಿರುತ್ತದೆ, ಅಷ್ಟು ಭಯವಾದರೆ ಪ್ರೊಫೈಲ್ ಲಾಕ್ ಅಥವಾ ಡಿಆಕ್ಟಿವೇಟ್ ಮಾಡಿ. ನಿಮ್ಮ ಅಪ್ಲೋಡ್ ಆದ ವಿಡಿಯೋ ಪೊಲೀಸ್ ಸಹಾಯದಿಂದ 24 ರಿಂದ 48 ಗಂಟೆ ಒಳಗೆ ಡಿಲೀಟ್ ಮಾಡಿಸಬಹುದು.

ಭಾರತೀಯ ದಂಡಸಂಹಿತೆ ವಿಭಾಗ :-
ಲೈಂಗಿಕ ಸುಲಿಗೆಯನ್ನು ಸಾಮಾನ್ಯವಾಗಿ ಸೆಕ್ಸ್ಟಾರ್ಶನ್ ಎಂದು ಕರೆಯಲಾಗುತ್ತದೆ, ಇದು ದುರದೃಷ್ಟವಶಾತ್ ಇಂದಿನ ಡಿಜಿಟಲ್ ಯುಗದಲ್ಲಿ ಹೆಚ್ಚು ಪ್ರಚಲಿತವಾಗುತ್ತಿರುವ   ಅಪರಾಧವಾಗಿದೆ. ಭಾರತೀಯ ದಂಡ ಸಂಹಿತೆ (IPC) ಲೈಂಗಿಕ ಸುಲಿಗೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ನಿಬಂಧನೆಗಳನ್ನು ಹೊಂದಿದೆ.

IPC ಯ 354D ಸೆಕ್ಷನ್ ಸ್ಟಾಕಿಂಗ್ ಅನ್ನು “ಒಬ್ಬ ವ್ಯಕ್ತಿಯನ್ನು ಅನುಸರಿಸುವುದು ಮತ್ತು ಸಂಪರ್ಕಿಸುವುದು ಅಥವಾ ಅಂತಹ ವ್ಯಕ್ತಿಯಿಂದ ನಿರಾಸಕ್ತಿಯ ಸ್ಪಷ್ಟ ಸೂಚನೆಯ ಹೊರತಾಗಿಯೂ ಪದೇ ಪದೇ ವೈಯಕ್ತಿಕ ಸಂವಹನವನ್ನು ಬೆಳೆಸಲು ಅಂತಹ ವ್ಯಕ್ತಿಯನ್ನು ಸಂಪರ್ಕಿಸಲು ಪ್ರಯತ್ನಿಸುವುದು ಅಪರಾಧ.

ಫೋನ್ ಕರೆಗಳು, ಇಮೇಲ್ಗಳು, ಸಾಮಾಜಿಕ ಮಾಧ್ಯಮ ವೇದಿಕೆಗಳು ಇತ್ಯಾದಿಗಳ ಮೂಲಕ ಬಲಿಪಶುವನ್ನು ಸಂಪರ್ಕಿಸಲು ಅನಗತ್ಯ ಮತ್ತು ಪುನರಾವರ್ತಿತ ಪ್ರಯತ್ನಗಳನ್ನು ಒಳಗೊಂಡಿರಬಹುದು. ಇದು ಗಂಭೀರ ಅಪರಾಧವಾಗಿದೆ ಮತ್ತು ಮೊದಲ ಅಪರಾಧಕ್ಕೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಗೆ ಕಾರಣವಾಗಬಹುದು. , ಮತ್ತು ನಂತರದ ಅಪರಾಧಗಳ ಮೇಲೆ ಐದು ವರ್ಷಗಳವರೆಗೆ ಶಿಕ್ಷೆಯಿದೆ.

IPC ಯ ಸೆಕ್ಷನ್ 354A ಲೈಂಗಿಕ ಕಿರುಕುಳದ ಅಪರಾಧದೊಂದಿಗೆ ವ್ಯವಹರಿಸುತ್ತದೆ, ಇದರಲ್ಲಿ ಅನಪೇಕ್ಷಿತ ದೈಹಿಕ ಸಂಪರ್ಕ, ಲೈಂಗಿಕ ಅನುಕೂಲಕ್ಕಾಗಿ ವಿನಂತಿಗಳು ಮತ್ತು ಲೈಂಗಿಕ ಟೀಕೆಗಳನ್ನು ಒಳಗೊಂಡಿರುತ್ತದೆ. ಅನಗತ್ಯ ಸಂದೇಶಗಳು ಅಥವಾ ಚಿತ್ರಗಳ ಮೂಲಕ ಆನ್ಲೈನ್ನಲ್ಲಿ ಲೈಂಗಿಕ ಕಿರುಕುಳವೂ ನಡೆಯಬಹುದು. ಲೈಂಗಿಕ ಕಿರುಕುಳಕ್ಕಾಗಿ ಶಿಕ್ಷೆಯು ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸುತ್ತದೆ.

IPC ಯ ಸೆಕ್ಷನ್ 354C ವೋಯರಿಸಂನೊಂದಿಗೆ ವ್ಯವಹರಿಸುತ್ತದೆ, ಇದು ಯಾರನ್ನಾದರೂ ಅವರ ಒಪ್ಪಿಗೆಯಿಲ್ಲದೆ ಖಾಸಗಿ  ಫೋಟೋ ಸೆರೆಹಿಡಿಯುವುದು ಅಥವಾ ರೆಕಾರ್ಡ್ ಮಾಡುವುದು ಒಳಗೊಂಡಿರುತ್ತದೆ. ಇದು ಯಾರೊಬ್ಬರ ಜ್ಞಾನ ಅಥವಾ ಒಪ್ಪಿಗೆಯಿಲ್ಲದೆ ಅವರ ಸ್ಪಷ್ಟ ಚಿತ್ರಗಳು ಅಥವಾ ವೀಡಿಯೊಗಳನ್ನು ತೆಗೆದುಕೊಳ್ಳುವುದು ಒಳಗೊಂಡಿರುತ್ತದೆ, ಇದನ್ನು ಹೆಚ್ಚಾಗಿ ಲೈಂಗಿಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ವೋಯರಿಸಂಗೆ ಶಿಕ್ಷೆಯು ದಂಡದೊಂದಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯಾಗಬಹುದು.

ಈ ನಿಬಂಧನೆಗಳ ಜೊತೆಗೆ, IPC ಸೆಕ್ಷನ್ 376E ಅನ್ನು ಸಹ ಹೊಂದಿದೆ, ಇದು ನಿರ್ದಿಷ್ಟವಾಗಿ ಲೈಂಗಿಕ ಸುಲಿಗೆಯ ಅಪರಾಧದೊಂದಿಗೆ ವ್ಯವಹರಿಸುತ್ತದೆ. ಇದು ಲೈಂಗಿಕ ಸುಲಿಗೆಯನ್ನು “ಲೈಂಗಿಕ ಕಿರುಕುಳದ ಅಪರಾಧವನ್ನು ಮಾಡಿದವರಿಗೆ ಸಂಬಂಧಿಸಿದ ವಿಷಯವಾಗಿದೆ   ಯಾವುದೇ ವ್ಯಕ್ತಿಯನ್ನು ಸುಲಿಗೆ ಮಾಡುವ ಉದ್ದೇಶದಿಂದ ಅಪರಾಧವನ್ನು ಮಾಡುತ್ತಾರೆ” ಎಂದು ವ್ಯಾಖ್ಯಾನಿಸುತ್ತದೆ ಮತ್ತು ದಂಡದೊಂದಿಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಇದೆ.

ಈ ಅಪರಾಧಗಳು ಬಲಿಪಶು ಮಹಿಳೆಯಾಗಿರುವ ಪ್ರಕರಣಗಳಿಗೆ ಮಾತ್ರ ಅನ್ವಯಿಸುವುದಿಲ್ಲ,   ಬಲಿಪಶು ಪುರುಷ ಅಥವಾ  ಎಲ್‌ಜಿಬಿಟಿ ಸಮುದಾಯದ ಸದಸ್ಯರಾಗಿರುವ ಪ್ರಕರಣಗಳಿಗೂ ಅನ್ವಯಿಸುತ್ತದೆ ಎಂಬುದು ಮುಖ್ಯವಾಗಿದೆ. ಐಪಿಸಿ ಎಲ್ಲಾ ವ್ಯಕ್ತಿಗಳಿಗೆ ಲೈಂಗಿಕ ಸುಲಿಗೆ ವಿರುದ್ಧ ರಕ್ಷಣೆ ನೀಡುತ್ತದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34905
ಮಣಿಕಂಠ ತ್ರಿಶಂಕರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು