News Karnataka Kannada
Thursday, May 02 2024
ಸಂಪಾದಕರ ಆಯ್ಕೆ

ಬೆಂಗಳೂರು: ಕಾಫಿ ಮಂಡಳಿಯಿಂದ ಅಮೆಜಾನ್ ಮೂಲಕ 4 ಪ್ರೀಮಿಯಂ ಬ್ರಾಂಡ್ ಕಾಫಿಪುಡಿ ಬಿಡುಗಡೆಗೆ ಸಿದ್ದತೆ

Coffee
Photo Credit : By Author

ಬೆಂಗಳೂರು: ದೇಶದಲ್ಲಿ ಕಾಫಿ ಬೆಳೆಗಾರರು ಮತ್ತು ಕಾಫಿ ಉದ್ಯಮವನ್ನು ಪ್ರತಿನಿಧಿಸುವ ಸಂಸ್ಥೆ ಆಗಿರುವ ಕಾಫಿ ಬೋರ್ಡ್ ಇದೀಗ ದೇಶದ ಜನತೆಗೆ ಪರಿಶುದ್ದ ಕಾಫಿ ಪುಡಿಯನ್ನು ಅಮೆಜಾನ್ ಮೂಲಕ ವಿತರಿಸಲು ಮುಂದಾಗಿದೆ.

ಅಂತಾರಾಷ್ಟ್ರೀಯ ಬೆಲೆಯ ಏರಿಳಿತದ ಸವಾಲುಗಳು ಮೇಲುಗೈ ಸಾಧಿಸುತ್ತಿದ್ದಂತೆ, ಕಾಫಿ ಮಂಡಳಿಯು ದೇಶಾದ್ಯಂತ ಶುದ್ಧ ಕಾಫಿಗಾಗಿ ಇರುವ ಬೇಡಿಕೆಯನ್ನು ಪೂರೈಸಲು ಪ್ರಯತ್ನಿಸುತ್ತಿದೆ. ಕಾಫಿ ಮಂಡಳಿಯು ‘ಇಂಡಿಯಾ ಕಾಫಿ’ ಬ್ರಾಂಡ್ನಲ್ಲಿ ನಾಲ್ಕು ಪ್ರೀಮಿಯಂ ಕಾಫಿ ಪುಡಿಗಳಗಳನ್ನು ಮತ್ತು ‘ಕಾಫೀಸ್ ಆಫ್ ಇಂಡಿಯಾ’ ಹೆಸರಿನಲ್ಲಿ ಎರಡು ಕೈಗೆಟುಕುವ ದರದ ಕಾಫಿ ಪುಡಿಗಳನ್ನು ಬಿಡುಗಡೆ ಮಾಡುವ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ನಿರ್ಧರಿಸಿದೆ.

ಈ ಕುರಿತು ಮಾಹಿತಿ ನೀಡಿದ ಕಾಪಿ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಜಿ ಏ ಜಗದೀಶ್ ಅವರು ಈಗ, ನಾವು ನಾಲ್ಕು ಪ್ರೀಮಿಯಂ ಕಾಫಿಗಳಾದ ಕೂರ್ಗ್ ಅರೇಬಿಕಾ ಕಾಫಿ (geographical identification)(ಜಿಐ), ಚಿಕ್ಕಮಗಳೂರು ಅರೇಬಿಕಾ ಕಾಫಿ (ಜಿಐ), 100% ಅರೇಬಿಕಾ ಕಾಫಿ ಮತ್ತು ‘ಇಂಡಿಯಾ ಕಾಫಿ’ ಬ್ರಾಂಡ್ ಅಡಿಯಲ್ಲಿ ಅರೇಬಿಕಾ ಮತ್ತು ರೋಬಸ್ಟಾದ ಮಿಶ್ರಣವನ್ನು ಬಿಡುಗಡೆ ಮಾಡುವ ಮೂಲಕ ನಮ್ಮ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದೇವೆ,” ಎಂದು ಅವರು ಹೇಳಿದರು. ಅಲ್ಲದೆ ಕೈಗೆಟುಕುವ ದರದ ಕಾಫಿ ಪುಡಿಗಳಲ್ಲಿ 100% ಅರೇಬಿಕಾ ಮತ್ತು ಅರೇಬಿಕಾ ಮತ್ತು ರೋಬಸ್ಟಾದ ಮಿಶ್ರಣವನ್ನು ಒಳಗೊಂಡಿದ್ದು ಇದನ್ನು ‘ಕಾಫೀಸ್ ಆಫ್ ಇಂಡಿಯಾ’ ಬ್ರಾಂಡ್ನ ಅಡಿಯಲ್ಲಿ ಮಾರಾಟ ಮಾಡಲಾಗುವುದು ಎಂದರು.

ಕಾಫಿ ಮಂಡಳಿಯು ಅಮೆಜಾನ್ ಸಂಸ್ಥೆಯ ಮೂಲಕ ಕಾಫಿ ಪುಡಿ ಮಾರಾಟಕ್ಕೆ ಯೋಜನೆಯನ್ನು ರೂಪಿಸಿದ್ದು ಇದರಿಂದ ದೇಶದಲ್ಲಿ ಕಾಫಿ ಬಳಕೆಯು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹೇಳಿದರು. ದೇಶದಾದ್ಯಂತ ಲಕ್ಷಾಂತರ ಕಾಫಿ ತಜ್ಞರ ಅಭಿರುಚಿಗೆ ತಕ್ಕಂತೆ ನಮ್ಮ ಕಾಫಿ ಬೀಜಗಳನ್ನು ಅತ್ಯುತ್ತಮ ಕಾಫಿ ಎಸ್ಟೇಟ್ಗಳಿಂದ ಪಡೆಯಲಾಗಿದೆ” ಎಂದು ಡಾ. ಜಗದೀಶ ಹೇಳಿದರು.

ಅಮೆಜಾನ್ ನಲ್ಲಿ ಮಂಡಳಿಯ ಪ್ರೀಮಿಯಂ ಶ್ರೇಣಿಯ ಕಾಫಿಗಳು ಲಭ್ಯವಿರುತ್ತವೆ, ಅಮೆಜಾನ್ನ ಪ್ರಕಾರ ಕರ್ನಾಟಕ ದೇಶದ ಕಾಫಿ-ಉತ್ಪಾದಿಸುವ ಪ್ರದೇಶಗಳ ಮೂಲವಾಗಿದ್ದು ಇದು ನಮ್ಮ ಗ್ರಾಹಕರಿಗೆ ಮೌಲ್ಯಯುತ ಕೊಡುಗೆಗಳಲ್ಲಿ ಭಾರತೀಯ ಕಾಫಿಯ ರುಚಿಯನ್ನು ನೀಡುವ ನಮ್ಮ ಪ್ರಯತ್ನಕ್ಕೆ ಅನುಗುಣವಾಗಿದೆ ಎಂದು ಅಮೆಜಾನ್ ಇಂಡಿಯಾದ ಕನ್ಸ್ಯೂಮೆಬಲ್ಸ್ ನಿರ್ದೇಶಕ ನಿಶಾಂತ್ ರಾಮನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2022 ರ ಏಪ್ರಿಲ್-ಜೂನ್ನಲ್ಲಿ ದೇಶದ ಕಾಫಿ ರಫ್ತು 90% ರಷ್ಟು ಏರಿಕೆಯಾಗಿದೆ. ವಿಶ್ವದ ಏಳನೇ ಅತಿ ದೊಡ್ಡ ಕಾಫಿ ಉತ್ಪಾದಕ ರಾಷ್ಟ್ರವಾಗಿ, ಭಾರತವು ತನ್ನ ಕಾಫಿಯ 70% ಅನ್ನು ವಿದೇಶಗಳಿಗೆ ರಫ್ತು ಮಾಡುತ್ತದೆ. ಉತ್ತಮ ಗುಣಮಟ್ಟದ ಕಾಫಿಯ ಮೂಲಕ್ಕೆ ಹೆಸರುವಾಸಿಯಾಗಿರುವ ಪ್ರದೇಶವೆಂದು ಮೆಚ್ಚುಗೆ ಪಡೆದಿರುವ ಭಾರತವು ಏಳು ಜಿಐ-ನೋಂದಾಯಿತ ಕಾಫಿಗಳೊಂದಿಗೆ ಜಾಗತಿಕವಾಗಿ ಉತ್ಕೃಷ್ಟ ಕಾಫಿಗೆ ಹೆಸರುವಾಸಿ ಆಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕಾಫಿ ಮಂಡಳಿಯ ಮಾಜಿ ಉಪಾದ್ಯಕ್ಷ ಡಾ ಸಣ್ಣುವಂಡ ಕಾವೇರಪ್ಪ ಅವರು ಇದರಿಂದಾಗಿ ದೇಶದ ಆಂತರಿಕ ಕಾಫಿ ಬಳಕೆ ಹೆಚ್ಚಾಗಲಿದೆ. ಅಲ್ಲದೆ ಕಾಫಿ ಬಳಕೆಯೇ ಇಲ್ಲದ ಉತ್ತರದ ರಾಜ್ಯಗಳಲ್ಲಿ ಕಾಫಿಯ ಬಳಕೆ ಹೆಚ್ಚಾಗಲಿದ್ದು ಮಾರಾಟಕ್ಕಾಗಿ ವಿದೇಶಿ ಅವಲಂಬನೆ ಕಡಿಮೆ ಆಗಲಿದೆ ಎಂದು ಹೇಳಿದರು. ವಿಶ್ವದ ಇತರ ಕಾಫಿ ಬೆಳೆಯುವ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಆಂತರಿಕ ಬಳಕೆ ಅತ್ಯಂತ ಕಡಿಮೆ ಇದ್ದು ಇದು ಹೆಚ್ಚಾದಲ್ಲಿ ಬೆಲೆ ಸ್ಥಿರತೆ ಆಗಲಿದೆ ಎಂದು ಅವರು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು