ನವದೆಹಲಿ : ದೇಶದ ನಂ 1 ಟೆಲಿಕಾಂ ಕಂಪೆನಿ ಜಿಯೋ ಈಗ ಜನರಿಗೆ 6G ತಂತ್ರಜ್ಞಾನವವನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. 6ಜಿ ತಂತ್ರಜ್ಞಾನದಲ್ಲಿ ಸಂಶೋಧನೆ ಮತ್ತು ಪ್ರಮಾಣೀಕರಣ ಸಂಬಂಧಿತ ಚಟುವಟಿಕೆಗಳನ್ನು ಕೈಗೊಳ್ಳುವುದಕ್ಕಾಗಿ ಫಿನ್ಲೆಂಡ್ ವಿಶ್ವವಿದ್ಯಾಲಯವೊಂದರ ಜೊತೆ ಒಪ್ಪಂದ ಮಾಡಿಕೊಂಡಿದೆ.
ಈ ಒಪ್ಪಂದದಿಂದಾಗಿ 5G ಸಾಮರ್ಥ್ಯಗಳನ್ನು ವಿಸ್ತರಿಸಲಾಗುವುದು ಹಾಗೂ 6G- ಯುಗದ ಬಳಕೆ ಪ್ರಕರಣಗಳನ್ನು ಅನ್ವೇಷಿಸಲು ಸಹಾಯ ಮಾಡುತ್ತದೆ ಎಂದು ಜಿಯೋ ಹೇಳಿದೆ. 5G ಹೆಚ್ಚಿನ ವೇಗ, ಕಡಿಮೆ ಲೇಟೆನ್ಸಿ ಮತ್ತು ಡೇಟಾ ನೆಟ್ವರ್ಕ್ ಗಳಿಗೆ ಹೆಚ್ಚಿನ ಸಾಮರ್ಥ್ಯವನ್ನು ಶಕ್ತಗೊಳಿಸಲು ಈ ಪಾಲುದಾರಿಕೆಯನ್ನು ಹೊಂದಲಾಗಿದೆ ಎನ್ನಲಾಗಿದೆ.
ಜಿಯೋ ಪ್ಲಾಟ್ಫಾಮ್ ಈಗಾಗಲೇ ಅದರ 5ಜಿ ರೇನ್ ಮತ್ತು ಕೋರ್ ಪ್ಲಾಟ್ ಫಾರ್ಮ್ ಗಳಿಗೆ ಸಕ್ರಿಯ ಅಭಿವೃದ್ಧಿ ಕಾರ್ಯಕ್ರಮವನ್ನು ಹೊಂದಿದ್ದು,ಈ ಸಹಯೋಗದೊಂದಿಗೆ ಜಿಯೋ ತನ್ನ 5ಜಿ ಸಾಮರ್ಥ್ಯಗಳನ್ನು ಮತ್ತಷ್ಟು ವಿಸ್ತರಿಸುವ ಅವಕಾಶವನ್ನು ಪಡೆದಿದೆ.