News Karnataka Kannada
Sunday, May 05 2024
ದೆಹಲಿ

2021-22ನೇ ಸಾಲಿನ ನೀಟ್​-ಪಿಜಿ ಪ್ರವೇಶಾತಿಗೆ ಸುಪ್ರೀಂಕೋರ್ಟ್​ ಅನುಮತಿ

State-level essay competition for school and college students on independence day
Photo Credit :

ನವದೆಹಲಿ : 2021-22ನೇ ಸಾಲಿನ ನೀಟ್​-ಪಿಜಿ ಪ್ರವೇಶಾತಿ ವಿಚಾರದಲ್ಲಿ ಆಕಾಂಕ್ಷಿಗಳಿಗೆ ಬಿಗ್​ ರಿಲೀಫ್​ ನೀಡಿರುವ ಸುಪ್ರೀಂಕೋರ್ಟ್​, ಈ ವರ್ಷದ ವೈದ್ಯಕೀಯ ಕೋರ್ಸ್‌ಗಳ ಪ್ರವೇಶದಲ್ಲಿ ಹಿಂದುಳಿದ ವರ್ಗಗಳ ಶೇ. 27 ಮತ್ತು ಆರ್ಥಿಕವಾಗಿ ದುರ್ಬಲ ವರ್ಗ(ಇಡಬ್ಲ್ಯೂಎಸ್​)ಗಳ ಶೇ. 10ರ ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿಯವ ಮೂಲಕ ನೀಟ್​-ಪಿಜಿ ಕೌನ್ಸೆಲಿಂಗ್ ಅನ್ನು ಪುನರಾರಂಭಿಸಲು ಸುಪ್ರೀಂಕೋರ್ಟ್​ ಅವಕಾಶ ಮಾಡಿಕೊಟ್ಟಿದೆ.

ಆರ್ಥಿಕವಾಗಿ ದುರ್ಬಲ ವರ್ಗಗಳ ಫಲಾನುಭವಿಗಳನ್ನು ಗುರುತಿಸಲು ಈ ವರ್ಷವೂ 8 ಲಕ್ಷ ರೂ. ಆದಾಯದ ಮಾನದಂಡವನ್ನು ಸುಪ್ರೀಂಕೋರ್ಟ್​ ಅನುಮತಿಸಿದೆ. ಇಡಬ್ಲ್ಯೂಎಸ್​ ಮೀಸಲಾತಿ ಮತ್ತು ಗುರುತಿಸುವ ಮಾನದಂಡಗಳ ಕುರಿತು ವಿವರಣಾತ್ಮಕ ವಿಚಾರಣೆಯನ್ನು ಮಾರ್ಚ್​ ಮೂರನೇ ವಾರದಲ್ಲಿ ನಡೆಸಲಾಗುವುದು ಎಂದು ಕೋರ್ಟ್​ ಹೇಳಿದ್ದು, ಆ ಸಮಯದಲ್ಲಿ ಇಡಬ್ಲ್ಯೂಎಸ್​ ಕೋಟಾಗಳ ಸಿಂಧುತ್ವವನ್ನು ಕೋರ್ಟ್​ ಪರಿಗಣಿಸಲಿದೆ. ಈ ಪ್ರವೇಶಗಳು ಸುಪ್ರೀಂಕೋರ್ಟ್‌ನ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತವೆ.

ಕೋರ್ಟ್​ ತೀರ್ಪಿನಿಂದಾಗಿ 45,000 ಕ್ಕೂ ಹೆಚ್ಚು ಕಿರಿಯ ವೈದ್ಯರು ಕಾರ್ಯಪಡೆಗೆ ಸೇರಬಹುದಾಗಿದೆ. ಅದರಲ್ಲೂ ದೇಶವು ಕೋವಿಡ್ ಪ್ರಕರಣಗಳ ಬೃಹತ್ ಉಲ್ಬಣದೊಂದಿಗೆ ಹೋರಾಡುತ್ತಿರುವ ಸಂದರ್ಭದಲ್ಲಿ ಇದು ಬಹಳ ಮಹತ್ವವಾಗಿದೆ. ಕಳೆದ 48 ಗಂಟೆಗಳಲ್ಲಿ ಭಾರತದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಕಳೆದ ವಾರ ನಡೆದ ವಿಚಾರಣೆಯಲ್ಲಿ, ಇಡಬ್ಲ್ಯೂಎಸ್ ಫಲಾನುಭವಿಗಳನ್ನು ಗುರುತಿಸಲು ಅಸ್ತಿತ್ವದಲ್ಲಿರುವ ಮಾನದಂಡಗಳನ್ನು ಈ ಶೈಕ್ಷಣಿಕ ವರ್ಷಕ್ಕೆ ಉಳಿಸಿಕೊಳ್ಳಲಾಗುವುದು ಎಂದು ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿತ್ತು. ನೀಟ್​ (ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್) ವಿದ್ಯಾರ್ಥಿಗಳಿಗೆ ಪ್ರವೇಶ ಮತ್ತು ಕಾಲೇಜುಗಳ ಹಂಚಿಕೆ ನಡೆಯುತ್ತಿರುವ ಈ ಸಮಯದಲ್ಲಿ ನಿಯಮಗಳ ಬದಲಾವಣೆಯು ಗೊಂದಲಗಳಿಗೆ ಕಾರಣವಾಗುತ್ತದೆ ಎಂದು ಸರ್ಕಾರ ಹೇಳಿತ್ತು. ಮುಂದಿನ ವರ್ಷದಿಂದ ಪರಿಷ್ಕೃತ ಮಾನದಂಡಗಳನ್ನು ಅನ್ವಯಿಸಬಹುದು ಎಂದು ಸರ್ಕಾರ ಹೇಳಿದೆ.

ಪರಿಷ್ಕೃತ ಮಾನದಂಡವು ವಿವಾದಾತ್ಮಕ 8 ಲಕ್ಷ ರೂ. ವಾರ್ಷಿಕ ಆದಾಯದ ಮಿತಿಯನ್ನು ಉಳಿಸಿಕೊಂಡಿದೆ. ಆದರೆ, ಐದು ಎಕರೆ ಅಥವಾ ಅದಕ್ಕಿಂತ ಹೆಚ್ಚಿನ ಕೃಷಿ ಭೂಮಿ ಹೊಂದಿರುವ ಕುಟುಂಬಗಳನ್ನು ಈ ಮಾನದಂಡದಿಂದ ಹೊರತುಪಡಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು