News Karnataka Kannada
Tuesday, May 14 2024
ಸಂಪಾದಕರ ಆಯ್ಕೆ

ರಷ್ಯಾ ದಾಳಿಗೆ ನಾಶವಾಯ್ತು ವಿಶ್ವದ ಅತಿ ದೊಡ್ಡ ವಿಮಾನ!

Big Aeroplane
Photo Credit : Twitter

ರಷ್ಯಾದ ಆಕ್ರಮಣದಿಂದ ಉಕ್ರೇನ್‌ ನಲ್ಲಿ ಉದ್ವಿಗ್ನ ಸ್ಥಿತಿ ಎದುರಾಗಿದ್ದು, ಈ ನಡುವೆ ವಿಶ್ವದ ಅತಿದೊಡ್ಡ ವಿಮಾನವನ್ನು ರಷ್ಯಾ ಪಡೆ ಧ್ವಂಸ ಮಾಡಿದೆ. ಇದು ಉಕ್ರೇನ್‌ ನ ಆಂಟೋನೋವ್‌ 225 ಸರಕು ವಿಮಾನವಾಗಿದ್ದು, ಇದನ್ನು ಉಕ್ರೇನ್‌ ನ ಕೀವ್‌ ನ ಹೊರವಲಯದಲ್ಲಿ ನಾಶ ಮಾಡಿಲಾಗಿದೆ ಎಂದು ಉಕ್ರೇನ್‌ ತಿಳಿಸಿದೆ.

ಈ ವಿಮಾನಕ್ಕೆ ʼಮ್ರೀಯಾʼ ಎಂದು ಹೆಸರಿಸಲಾಗಿತ್ತು. ಅಂದರೆ ಉಕ್ರೇನ್‌ ಭಾಷೆಯಲ್ಲಿ ಕನಸು ಎಂದರ್ಥ ಬರಲಿದೆ. ಇದು ಉಕ್ರೇನ್‌ ವಾಯುಯಾನದ ಹೆಗ್ಗುರುತಾಗಿತ್ತು. ಇದು 84 ಮೀಟರ್‌ ಉದ್ದ (276 ಅಡಿ), ಗಂಟೆಗೆ 850 ಕಿ. ವೇಗದಲ್ಲಿ 250 ಟನ್‌ ಸರಕು ಸಾಗಿಸಬಲ್ಲ ಅತ್ಯಂತ ಬಲಿಷ್ಠವಾಗಿದೆ.

ರಷ್ಯಾದ ದಾಳಿಯಲ್ಲಿ ನಾಶವಾಗಿರುವ ʼಮ್ರಿಯಾʼ ವಿಮಾನವನ್ನು ರಿಪೇರಿ ಮಾಡಲು 3 ಶತಕೋಟಿ ಡಾಲರ್‌ ವೆಚ್ಚವಾಗಲಿದ್ದು, ಬರೋಬ್ಬರಿ 5 ವರ್ಷ ಸಮಯ ಬೇಕಾಗುತ್ತದೆ ಎಂದು ತಿಳಿಸಿದೆ. ಈ ವಿಮಾನವನ್ನು 1988ರ ಸೋವಿಯತ್‌ ಏರೋನಾಟಿಕಲ್‌ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಹಾರಾಟ ಕೈಗೊಂಡಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು