ಹಿಂಸಾಚಾರದ ಮೂಲಕವೇ ಅಫ್ಘಾನಿಸ್ತಾನದ ಆಡಳಿತವನ್ನು ವಶಕ್ಕೆ ಪಡೆದ ತಾಲಿಬಾನ್, ಇದೀಗ ಉಕ್ರೇನ್ ಮತ್ತು ರಷ್ಯಾ ಸಂಯಮದಿಂದ ವರ್ತಿಸಬೇಕು ಎಂದು ಸಲಹೆ ನೀಡಿದೆ.
ನಾಗರಿಕರ ಸಾವು ನೋವಿನ ಬಗ್ಗೆ ಕಳವಳ ವ್ಯಕ್ತಪಡಿಸಿರುವ ತಾಲಿಬಾನ್, ಶಾಂತಿಯುತ ಮಾತುಕತೆಯಿಂದ ಬಿಕ್ಕಟ್ಟು ಬಗೆಹರಿಸಬಹುದು. ಎರಡೂ ದೇಶಗಳು ಹಿಂಸಾಚಾರದಿಂದ ದೂರ ಇರಿ ಎಂದು ಹೇಳಿದೆ.
ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಘಾನಿಸ್ತಾನವು ಉಕ್ರೇನ್ನ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ, ಸಾವುನೋವುಗಳ ಬಗ್ಗೆ ಆತಂಕವಿದೆ. ಎರಡು ದೇಶಗಳು ಸಂಯಮ ತೋರಿ, ಶಾಂತಿಯುತ ಮಾತುಕತೆ ನಡೆಸಿ. ಹಿಂಸಾಚಾರ ತೀವ್ರವಾಗುವ ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದು ಹೇಳಿದೆ.