News Karnataka Kannada
Saturday, May 04 2024
ಸಂಪಾದಕರ ಆಯ್ಕೆ

ಮೇ 15 ಮತ್ತು 16 ರಂದು ನಡೆಯಲಿದೆ ಈ ವರ್ಷದ ಮೊದಲ ಚಂದ್ರಗ್ರಹಣ!

Chandra Moon
Photo Credit :

ಈ ವರ್ಷದ ಮೊದಲ ಚಂದ್ರಗ್ರಹಣ ಮೇ 15 ಮತ್ತು 16 ರಂದು ನಡೆಯಲಿದೆ. ಭಾರತೀಯ ಕಾಲಮಾನ ಸೋಮವಾರ ಬೆಳಗ್ಗೆ 7.02ಕ್ಕೆ ಗ್ರಹಣ ಆರಂಭವಾಗಲಿದೆ. ಬೆಳಿಗ್ಗೆ 7.57 ರಿಂದ ಭೂಮಿಯ ನೆರಳು ಚಂದ್ರನ ಮೇಲೆ ಬೀಳಲು ಪ್ರಾರಂಭಿಸುತ್ತದೆ.

ಮಧ್ಯಾಹ್ನ 12.20ಕ್ಕೆ ಗ್ರಹಣ ಮುಗಿಯುತ್ತದೆ. ಆದರೆ ಭಾರತದಲ್ಲಿ ಈ ಗ್ರಹಣ ಗೋಚರವಾಗುವುದಿಲ್ಲ ದಕ್ಷಿಣ ಗೋಳಾರ್ಧದ ಭಾಗಗಳಲ್ಲಿ ಮಾತ್ರ ಗ್ರಹಣ ಸಂಭವಿಸಲಿದೆ. ಭಾರತ ಉತ್ತರ ಗೋಳಾರ್ಧದಲ್ಲಿದೆ. ಆ ಲೆಕ್ಕಾಚಾರದ ಮೇಲೆ ನಮಗೆ ಯಾವುದೇ ಗ್ರಹಣದ ಪರಿಣಾಮವಿಲ್ಲ.

ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿ ಬಂದಾಗ, ಭೂಮಿಯು ಚಂದ್ರನ ಮೇಲೆ ನೆರಳು ನೀಡುತ್ತದೆ. ಈ ನೆರಳು ಚಂದ್ರನನ್ನು ಆವರಿಸುವುದೇ ಸಂಪೂರ್ಣ ಚಂದ್ರಗ್ರಹಣವಾಗಿದೆ. ಈ ಬಾರಿ ಚಂದ್ರಗ್ರಹಣದ ವೇಳೆ ಭೂಮಿಯ ನೆರಳು ಚಂದ್ರನ ಶೇ.99.1ರಷ್ಟು ಭಾಗವನ್ನು ಆವರಿಸಲಿದೆ. ಭೂಮಿಯ ವ್ಯಾಸವು ಚಂದ್ರನ 4 ಪಟ್ಟು ಹೆಚ್ಚು. ಹಾಗಾಗಿ ಅದರ ನೆರಳು ಚಂದ್ರನ ಮೇಲೆ ದೀರ್ಘಕಾಲ ಉಳಿಯುವ ಸಾಧ್ಯತೆ ಇದೆ. ಸಂಪೂರ್ಣ ಚಂದ್ರಗ್ರಹಣವು ಸುಮಾರು 104 ನಿಮಿಷಗಳವರೆಗೆ ಇರಲಿದೆ.

ಸಂಪೂರ್ಣ ಚಂದ್ರಗ್ರಹಣವನ್ನು ರಕ್ತ ಚಂದ್ರ ಎಂದೂ ಕರೆಯುತ್ತಾರೆ. ಚಂದ್ರಗ್ರಹಣ ಸಂಭವಿಸಿದಾಗ, ಚಂದ್ರನು ಕೆಲ ದೇಶಗಳಲ್ಲಿ ಕೆಂಪು ಮತ್ತು ಗಾಢ ಕಿತ್ತಳೆ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಆದ್ದರಿಂದ ಚಂದ್ರಗ್ರಹಣವನ್ನು ಬ್ಲಡ್‌ ಮೂನ್ ಎಂದು ಕರೆಯಲಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು