News Karnataka Kannada
Friday, May 03 2024
ಸಂಪಾದಕರ ಆಯ್ಕೆ

ಪರೀಕ್ಷೆ ಎದುರಿಸುವುದಕ್ಕೆ ಪ್ರಧಾನಿ ಮೋದಿ ಪಾಠಶಾಲೆ – ‘ಪರೀಕ್ಷಾ ಪೆ ಚರ್ಚಾ’

Uttar Pradesh: PM to visit Varanasi today, launch various projects
Photo Credit :

ಪ್ರತಿವರ್ಷದ ಬೋರ್ಡ್ ಪರೀಕ್ಷೆಗಳ ಕ್ಯಾಲೆಂಡರ್ ಆಧರಿಸಿ ನಡೆದುಕೊಂಡು ಬಂದಿರುವ ಜನಪ್ರಿಯ ಕಾರ್ಯಕ್ರಮ ಎಂದರೆ ‘ಪರೀಕ್ಷಾ ಪೆ ಚರ್ಚಾ’. ಕೋವಿಡ್ ಕಾರಣದಿಂದ ಕಳೆದೆರಡು ವರ್ಷ ಆನ್ಲೈನ್ ಗೆ ಸೀಮಿತವಾಗಿದ್ದ ಕಾರ್ಯಕ್ರಮ ಈ ಬಾರಿ ದೆಹಲಿಯ ತಾಲ್ಕಟೋರ ಒಳಾಂಗಣ ಕ್ರೀಡಾಂಗಣದಲ್ಲಿ ತನ್ನ ಎಂದಿನ ಮೆರುಗಲ್ಲಿ ನಡೆಯಿತು.

ಕರ್ನಾಟಕವೂ ಸೇರಿದಂತೆ ದೇಶದ ನಾನಾ ಭಾಗಗಳಿಂದ ಬಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅಲ್ಲಿ ಹಾಜರಿದ್ದರಲ್ಲದೇ, ಆನ್ಲೈನ್ ಮೂಲಕವು ಶಾಲೆಗಳು ಮತ್ತು ವಿದ್ಯಾರ್ಥಿ-ಶಿಕ್ಷಕ ಸಮೂಹ ಬೆಸೆದುಕೊಂಡಿತ್ತು.

ಪರೀಕ್ಷೆಯನ್ನು ಎದುರಿಸುವ ನಿಟ್ಟಿನಲ್ಲಿ ಮಾತು ಮತ್ತು ವಿದ್ಯಾರ್ಥಿಗಳ ಪ್ರಶ್ನೆಗಳಿಗುತ್ತರಿಸುತ್ತ ಪ್ರಧಾನಿ ನರೇಂದ್ರ ಮೋದಿಯವರು ಈ ಬಾರಿ ಹೇಳಿದ ಪ್ರಮುಖಾಂಶಗಳು ಹೀಗಿವೆ.

  • ದಿನಕ್ಕೆ ಹದಿನೆಂಟು ಗಂಟೆ ಕೆಲಸ ಮಾಡಿಬಿಟ್ಟೆವು ಎಂಬ ಕಾರಣಕ್ಕೆ ಉತ್ತಮ ಫಲಿತಾಂಶ ಬರಬೇಕಿಲ್ಲ. ಪ್ರಯತ್ನಕ್ಕೆ ಗರಿಷ್ಟ ಪರಿಣಾಮ ಬರಲೆಂದು ಮಾಡುತ್ತಿರುವ ಕಾರ್ಯವನ್ನು ಆನಂದಿಸುತ್ತ ಕೆಲಸ ಮಾಡಬೇಕು.
  • ನಮ್ಮ ಹೆಣ್ಣುಮಕ್ಕಳ ಮಹಾತ್ವಾಕಾಂಕ್ಷೆಗಳಿಗೆ ಸಾಂಸ್ಥಿಕ ರೂಪವನ್ನು ಒದಗಿಸಬೇಕು. ಅವರು ಹೊರೆಯಲ್ಲ, ಜ್ಞಾನದ ಶ್ರೀಮಂತ ಮೂಲ. ಕೇವಲ ತಮ್ಮ ಬಗ್ಗೆ ಮಾತ್ರವಲ್ಲದೇ, ಸಮಾಜ ಮತ್ತು ದೇಶಕ್ಕಾಗಿ ಧೈರ್ಯ, ಬಲ ಮತ್ತು ತಾಳಿಕೆಯನ್ನು ತೋರಿಸುವವರು ಇವರು.
  • ಸ್ಫೂರ್ತಿಯನ್ನು ಪಡೆಯುವುದಕ್ಕೆ ಯಾವುದೇ ಚುಚ್ಚುಮದ್ದು ಅಥವಾ ಸೂತ್ರಗಳಿಲ್ಲ. ನಮ್ಮನ್ನು ನಾವು ಕಂಡುಕೊಂಡು, ಏನನ್ನು ಮಾಡುವುದರಿಂದ ನಮಗೆ ಸಂತೋಷ ದೊರಕುತ್ತದೆ ಎಂದು ಅರ್ಥಮಾಡಿಕೊಳ್ಳುವುದರಿಂದ ಸ್ಫೂರ್ತಿ ಕಂಡುಕೊಳ್ಳಬಹುದು.
  • ಪರೀಕ್ಷೆ ಬಗ್ಗೆ ಆತಂಕ ಪಟ್ಟುಕೊಳ್ಳುವುದು ನಿಮ್ಮ ಕೆಲಸವಲ್ಲ, ಅದನ್ನು ಪಾಲಕರಿಗೆ ಬಿಟ್ಟುಬಿಡಿ ಅಂತಲೂ ತಮಾಶೆ ಮಾಡಿದರು ಪ್ರಧಾನಿ.
  • ಆನ್ಲೈನ್’ ಶಿಕ್ಷಣದಿಂದ ಅನಗತ್ಯ ವಿಷಯಗಳತ್ತ ಮನಸ್ಸು ಎಳೆಯುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, “ಸಮಸ್ಯೆ ಇರೋದು ಆನ್ಲೈನ್ ಅಥವಾ ಆಫ್ ಲೈನ್ ಮಾಧ್ಯಮದಲ್ಲಲ್ಲ. ಬದಲಿಗೆ ಮನಸ್ಸಿನಲ್ಲಿ. ತರಗತಿಗಳಲ್ಲೂ ಪಾಠ ಕೇಳುತ್ತಿರುವಾಗ ನಿಮ್ಮ ಮನಸ್ಸು ಮತ್ತೆಲ್ಲೋ ಹೋಗುತ್ತದಲ್ಲವೇ? ಈ ಹಿಂದೆ ಕಂಠಸ್ಥವಾಗಿಯೇ ಕಲಿಯುವ ಗುರುಕುಲ ಪದ್ಧತಿ ತ್ತು. ಯುಗ ಬದಲಾದಂತೆ ಮಾಧ್ಯಮ ಬದಲಾಗುವುದು ಸಹಜ. ಇದನ್ನೊಂದು ಅವಕಾಶವಾಗಿ ನೋಡಿಕೊಳ್ಳಬೇಕು.”
  • ಮನಸ್ಸನ್ನು ಶಾಂತವಾಗಿ ಇರಿಸಿಕೊಂಡಾಗ ಪರೀಕ್ಷೆಯಲ್ಲಿ ನೀವು ಓದಿದ್ದನ್ನೆಲ್ಲ ನೆನಪಿಸಿಕೊಂಡು ಉತ್ತರಿಸುವುದಕ್ಕೆ ಸಾಧ್ಯವಾಗುತ್ತದೆ. ನೀವು ನೀರಿನ ಪಾತ್ರೆಯಲ್ಲಿ ನಾಣ್ಯಗಳನ್ನು ಹಾಕಿ ನಂತರ ಅದನ್ನು ಅಲ್ಲಾಡಿಸಿದಾಗ, ನಾಣ್ಯ ಎಲ್ಲಿದೆ ಎದು ಗೊತ್ತಾಗುವುದೇ ಇಲ್ಲ. ಜ್ಞಾಪಕಶಕ್ತಿ ಸಹ ಅಂಥದ್ದೇ. ಶಾಂತವಾಗಿ ಇಟ್ಟುಕೊಂಡಾಗ ಕೆಲಸಕ್ಕೆ ಬರುತ್ತದೆ.
  • ಆರೇಳು ವರ್ಷಗಳ ಸಮಾಲೋಚನೆ ನಂತರ ಬಂದಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಕಲಿಕೆಯಲ್ಲಿ ಕ್ರೀಡೆ ಮತ್ತು ಕೌಶಲಗಳಿಗೆ ಪ್ರಾಧಾನ್ಯ ನೀಡಿದೆ. ಇದು ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಲಿದೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು