News Karnataka Kannada
Tuesday, May 07 2024
ಸಂಪಾದಕರ ಆಯ್ಕೆ

ಇದೇ ಮೊದಲಬಾರಿಗೆ ಮನಷ್ಯರಲ್ಲಿ ಕಾಣಿಸಿಕೊಂಡ H3N8 ಹಕ್ಕಿ ಜ್ವರ!

Bird Fever
Photo Credit :

H3N8 ಹಕ್ಕಿ ಜ್ವರವು ಇದೇ ಮೊದಲಬಾರಿಗೆ ಮನಷ್ಯರಲ್ಲಿ ಕಾಣಿಸಿಕೊಂಡಿದೆ. ಚೀನಾದ ಹೆನಾನ್‌ ಪ್ರಾಂತ್ಯದಲ್ಲಿ ನಾಲ್ಕು ವರ್ಷದ ಬಾಲಕನಿಗೆ ಸೋಂಕು ತಾಗಿರುವುದನ್ನು ಚೀನಾದ ಮಾಧ್ಯಮಗಳು ವರದಿಮಾಡಿವೆ.

ಈ ಕುರಿತು ಚೀನಾದ ನ್ಯಾಷನಲ್‌ ಹೆಲ್ತ್‌ ಕಮಿಷನ್‌ ದೃಢಪಡಿಸಿದ್ದು ಸೋಂಕು ಹರಡುವ ಸಾಧ್ಯತೆಗಳು ಕಡಿಮೆ ಎಂದಿದೆ. ಸೋಂಕು ತಗುಲಿರುವ ಬಾಲಕನಲ್ಲಿ ಜ್ವರ ಸೇರಿದಂತೆ ಹಲವು ಲಕ್ಷಣಗಳು ಕಾಣಿಸಿಕೊಂಡಿದ್ದು ಆತನ ಸಂಪರ್ಕಕ್ಕೆ ಬಂದಿರುವ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ ಎನ್‌ಎಚ್‌ಸಿ ಎಂದು ಹೇಳಿದೆ.

ಈ ಹಿಂದೆ ಜಗತ್ತಿನ ಬೇರೆ ಭಾಗಗಳಲ್ಲಿ ಕುದುರೆ ನಾಯಿ ಸೇರಿದಂತೆ ಬೇರೆ ಬೇರೆ ಪ್ರಾಣಿಗಳಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು. ಆದರೆ ಮನುಷ್ಯರಲ್ಲಿ ಇದೇ ಮೊದಲ ಬಾರಿಗೆ ಪತ್ತೆಯಾಗಿದ್ದು ಮನೆಯಲ್ಲಿ ಸಾಕಿರುವ ಕೋಳಿಗಳ ಸಂಪರ್ಕದಿಂದ ಸೋಂಕು ತಗುಲಿದೆ ಎನ್ನಲಾಗಿದೆ. ಸೋಂಕು ಮನುಷ್ಯರಿಗೆ ಹರಡುವಷ್ಟು ಪರಿಣಾಮಕಾರಿಯಾಗಿಲ್ಲವೆಂದು ಪ್ರಾಥಮಿಕ ಅಧ್ಯಯನದಲ್ಲಿಕಂಡುಬಂದಿದ್ದು ದೊಡ್ಡ ಪ್ರಮಾಣದ ಸಾಂಕ್ರಾಮಿಕವಾಗುವ ಸಾಧ್ಯತೆ ಅತಿ ಕಡಿಮೆ ಎಂದು ಚೀನಾದ ಆರೋಗ್ಯ ಪ್ರಾಧಿಕಾರ ಹೇಳಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು