ಅಲ್ಯುಮಿನಿಯಂ ಏಣಿ ಜೀವ ತೆಗೆಯಬಹುದು ಹುಷಾರ್!

ಮಲೆನಾಡಿನಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕೃಷಿಕರಿಗೆ ಏಣಿ ಬಹುಪಯೋಗಿಯಾಗಿದ್ದು, ಒಂದಲ್ಲ ಒಂದು ಚಟುವಟಿಕೆಗೆ ಏಣಿ ಅತಿ ಅವಶ್ಯಕವಾಗಿದೆ.

ಮರಹತ್ತಲು, ಸೊಪ್ಪುಕೊಚ್ಚಲು, ಕರಿಮೆಣಸು ಕೊಯ್ಲು ಮಾಡಲು ಹೀಗೆ ಹಲವಾರು ರೀತಿಯ ಕೆಲಸಕ್ಕೆ ಏಣಿಯನ್ನು ಬಳಕೆ ಮಾಡಲಾಗುತ್ತಿದೆ. ಅದರಲ್ಲೂ ಕೊಡಗಿನಲ್ಲಿ ಕರಿಮೆಣಸು ಕೊಯ್ಲುಗೆ, ಮರಕಪಾತ್ ಗೆ ಏಣಿ ಬೇಕೇ ಬೇಕು. ಆದರೆ ಈ ಏಣಿಯನ್ನು ಜಾಗರೂಕತೆಯಿಂದ ಬಳಸದ ಕಾರಣದಿಂದಾಗಿ ಜೀವಹಾನಿಗಳು ಸಂಭವಿಸುತ್ತಿರುವುದು ಬೇಸರದ ಸಂಗತಿಯಾಗಿದೆ.

ಹಿಂದೆ ಮರಕ್ಕೆ ಹಬ್ಬಿ ಬೆಳೆಯುವ ಬಳ್ಳಿಯಿಂದ ಕರಿಮೆಣಸು ಕೊಯ್ಲು ಮಾಡಲು ಬಿದಿರಿನ ಏಣಿಗಳನ್ನು ಬಳಸುತ್ತಿದ್ದರು. ಬಿದಿರು ಮೆಳೆಗಳಿಂದ ಉತ್ತಮವಾದ ಬಿದಿರನ್ನು ಕಡಿದು ಅದರಿಂದ ಏಣಿ ಮಾಡಿಟ್ಟುಕೊಳ್ಳುತ್ತಿದ್ದರು. ಅದು ಒಂದಷ್ಟು ವರ್ಷಗಳ ಕಾಲ ಬಾಳಿಕೆ ಬರುತ್ತಿತ್ತು. ಆದರೆ ಬಿದಿರುಮೆಳೆಗಳು ನಾಶವಾದ ಬಳಿಕ ಬಿದಿರು ಏಣಿಗಳು ಮಾಯವಾಗಿದ್ದು, ಈಗ ರೈತರ ಅನುಕೂಲಕ್ಕಾಗಿ ಅಲ್ಯುಮಿನಿಯಂ ಏಣಿಗಳು ಬಂದಿವೆ. ಇವು ಹಗುರವಾಗಿರುವುದರೊಂದಿಗೆ ಬಳಕೆಗೆ ಅನುಕೂಲವಾಗಿದೆ.

ಆದರೆ ಇಲ್ಲಿ ಸಮಸ್ಯೆಯಾಗುತ್ತಿರುವುದು ಮುಂಜಾಗ್ರತೆಯ ಕೊರತೆಯಿಂದ ಎಂದರೆ ತಪ್ಪಾಗಲಾರದು. ಏಕೆಂದರೆ ಮಲೆನಾಡು ಪ್ರದೇಶ ಗುಡ್ಡಕಾಡಿನಿಂದ ಕೂಡಿದ್ದು, ಈ ಪ್ರದೇಶಗಳಲ್ಲಿ ಕಾಫಿ, ಅಡಿಕೆ ತೋಟಗಳಿದ್ದು ಈ ತೋಟಗಳ ನಡುವೆಯೇ ಒಂದೆಡೆಯಿಂದ ಮತ್ತೊಂದೆಡೆಗೆ ವಿದ್ಯುತ್ ಸಂಪರ್ಕ ಹಾದು ಹೋಗಿವೆ.

ಈ ತಂತಿಗಳು ವರ್ಷದಿಂದ ವರ್ಷಕ್ಕೆ ಜೋತು ಬೀಳುತ್ತಿವೆ. ಮಳೆಗಾಲದಲ್ಲಿ ತಂತಿ ಮೇಲೆ ಮರದ ಕೊಂಬೆಗಳು ಬಿದ್ದು ತಂತಿ ತುಂಡಾಗುವುದು ಮತ್ತು ಸರಿಪಡಿಸುವುದು ಹೀಗೆ ಆಗಾಗ್ಗೆ ಪುನರಾವರ್ತನೆಯಾಗುವುದರಿಂದ ತೋಟದ ನಡುವೆ ಕಂಬದಿಂದ ಕಂಬಕ್ಕೆ ಎಳೆದಿರುವ ತಂತಿಗಳು ಜೋತು ಬಿದ್ದಿದ್ದು ಅವುಗಳಿಂದ ತಪ್ಪಿಸಿಕೊಂಡು ಕೆಲಸ ಮಾಡುವುದೇ ಕಷ್ಟವಾಗುತ್ತಿದೆ.

ಪ್ರತಿ ವರ್ಷವೂ ಚೆಸ್ಕಾಂ ಸಿಬ್ಬಂದಿ ಇವುಗಳ ಬಗ್ಗೆ ಪರಿಶೀಲನೆ ನಡೆಸದ ಕಾರಣ ಮತ್ತು ಬೆಳೆಗಾರರು ಈ ಬಗ್ಗೆ ಸಂಬಂಧಿಸಿದವರ  ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸುವುದರಿಂದ  ಈ ವಿದ್ಯುತ್ ತಂತಿಗಳಿಂದ ಅವಘಡ ಹೆಚ್ಚಾಗಿ ಸಂಭವಿಸುತ್ತದೆ.

ಕರಿಮೆಣಸು ಕೊಯ್ಲು, ಇನ್ನಿತರ ಕೆಲಸಗಳಿಗೆ ಏಣಿ ಬಳಕೆ ಮಾಡುವ ಸಂದರ್ಭ ಕಾರ್ಮಿಕರು ಮತ್ತು ಬೆಳೆಗಾರರು ಮುಂಜಾಗ್ರತೆ ವಹಿಸದೆ ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಅಲ್ಯುಮಿನಿಯಂ ಏಣಿಗಳು ಎಷ್ಟು ಉಪಯೋಗವಾಗಿವೆಯೋ ಅಷ್ಟೇ ಅಪಾಯವನ್ನು ತಂದೊಡ್ಡುತ್ತಿವೆ.

ಕಳೆದ ಐದಾರು ವರ್ಷಗಳಲ್ಲಿ ಕರಿಮೆಣಸು ಕೊಯ್ಲು ಸಂದರ್ಭ ಏಣಿಯನ್ನು ಒಂದು ಬಳ್ಳಿಯಿಂದ ಮತ್ತೊಂದು ಬಳ್ಳಿಗೆ ಕೊಂಡೊಯ್ದು ಇಡುವಾಗ ಮರಗಳ ನಡುವೆ ಹಾದು ಹೋಗಿರುವ ವಿದ್ಯುತ್ ತಂತಿಗೆ ಏಣಿ ಸ್ಪರ್ಶಿಸಿ ಹಲವಾರು ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪ್ರತಿವರ್ಷವೂ ಅರಿವು ಮೂಡಿಸುತ್ತಿದ್ದರೂ ಅಲ್ಲಲ್ಲಿ ಅವಘಡಗಳು ನಡೆಯುತ್ತಲೇ ಇವೆ.

ತೋಟದ ನಡುವೆ ಹಾದು ಹೋಗಿರುವ ವಿದ್ಯುತ್ ತಂತಿ ಬಗ್ಗೆ ಕೆಲಸಗಾರರ ಗಮನಕ್ಕೆ ತಂದರೂ ಕೆಲವೊಮ್ಮೆ ಕೆಲಸದ  ಅವಸರದಲ್ಲಿ ವಿದ್ಯುತ್ ತಂತಿಯನ್ನು ನೋಡದೆ ಏಣಿಯನ್ನು ಹೊತ್ತೊಯ್ಯುವಾಗ ತಂತಿಗೆ ತಗುಲಿ ಅವಘಡಗಳು ಸಂಭವಿಸುತ್ತಿವೆ.

ಈ ಬಗ್ಗೆ ಕಾರ್ಮಿಕರು ಕೂಡ ಸುತ್ತಮುತ್ತ ಗಮನಿಸಿಕೊಂಡು ಕೆಲಸವನ್ನು ಮಾಡಬೇಕಾಗುತ್ತದೆ. ಆದರೆ ಮೇಲಿಂದ ಮೇಲೆ ದುರಂತಗಳು ಸಂಭವಿಸುತ್ತಿದ್ದರೂ ಯಾರೂ ಕೂಡ ಇದರತ್ತ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಹೀಗಾಗಿ ಪ್ರತಿವರ್ಷವೂ ಅಲ್ಯುಮಿನಿಯಂ ಏಣಿಗೆ ವಿದ್ಯುತ್ ತಂತಿ ಸ್ಪರ್ಶವಾಗಿ ಸಾಯುವುದು ನಡೆಯುತ್ತಲೇ ಇದೆ. ಇನ್ನಾದರೂ ತೋಟದ ನಡುವೆ ಏಣಿಯನ್ನು ಕೊಂಡೊಯ್ಯುವಾಗ ಎಚ್ಚರಿಕೆ ವಹಿಸಿ ಜೀವವನ್ನು ಕಾಪಾಡಿಕೊಳ್ಳಲಿ.

Sneha Gowda

Recent Posts

ಮಡಿಕೇರಿ ಜಿಲ್ಲಾಡಳಿತದಿಂದ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…

27 mins ago

ಗುಂಡ್ಲುಪೇಟೆ: ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವು

ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

54 mins ago

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ: ಮಹೇಶ್ ಟೆಂಗಿನಕಾಯಿ

ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…

1 hour ago

ನಾಲ್ಕು ವರ್ಷದ  ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ

ಮನೆಯ ಹೊರಗೆ ಆಟಾವಾಡುತ್ತಿದ್ದ ನಾಲ್ಕು ವರ್ಷದ  ಮಕ್ಕಳ ಮೇಲೆ ಬೀದಿ ನಾಯಿಗಳ  ಗ್ಯಾಂಗ್  ಏಕಾಏಕಿ ದಾಳಿ ಮಾಡಿದ ಘಟನೆ ಪಟ್ಟಣದ…

2 hours ago

ಜಿಲ್ಲಾಡಳಿತ ಬೀದರ್ ವತಿಯಿಂದ ಬಸವಣ್ಣ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಬಸವಣ್ಣನವರ ವಿಚಾರಗಳು ಕೇವಲ ನಮ್ಮ ರಾಜ್ಯಕ್ಕೆ ಮಾತ್ರವಲ್ಲ ಅವು ಇಡೀ ನಮ್ಮ ರಾಷ್ಟ್ರದಾದ್ಯಂತ ಇಂದು ಪ್ರಸ್ತುತ ಇವೆ ಎಂದು ಜಿಲ್ಲಾ…

2 hours ago

ನಟಿ ರೂಪಾ ಅಯ್ಯರ್‌ ಗೆ ಆನ್ ಲೈನ್ ನಲ್ಲಿ ವಂಚನೆ: ಹಣ ದೋಚೋಕೆ ಟ್ರೈ ಮಾಡಿದ ಕಳ್ಳರು

ಸ್ಯಾಂಡಲ್‌ವುಡ್ ನಟಿ, ನಿರ್ದೇಶಕಿ ರೂಪಾ ಅಯ್ಯರ್‌ ಅವರಿಗೆ ಆನ್ ಲೈನ್ ಕಳ್ಳರು ಕಾಟ ಕೊಟ್ಟಿದ್ದಾರೆ. ಸಿಸಿಬಿ ಸಿಸಿಬಿ ಅಧಿಕಾರಿಗಳೆಂದು ಕಾಲ್…

2 hours ago