2019 ಕ್ಕೆ ಹೋಲಿಸಿದರೆ 2020 ರಲ್ಲಿ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಕುಸಿತ!

ದೆಹಲಿ: 2019 ಕ್ಕೆ ಹೋಲಿಸಿದರೆ 2020 ರಲ್ಲಿ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಗಮನಾರ್ಹವಾದ ಕುಸಿತ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಪಘಾತಗಳು ಸರಾಸರಿ ಶೇಕಡಾ 18.46 ರಷ್ಟು ಕಡಿಮೆಯಾಗಿದೆ, ಸಾವನ್ನಪ್ಪಿದವರ ಸಂಖ್ಯೆ ಶೇಕಡಾ 12.84. ಹಾಗೂ ಗಾಯಾಳುಗಳ ಸಂಖ್ಯೆ ಶೇಕಡಾ 22.84 ರಷ್ಟು ಕಡಿಮೆಯಾಗಿದೆ. 2020 ರಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 3,66,138 ರಸ್ತೆ ಅಪಘಾತಗಳು ವರದಿಯಾಗಿದೆ. ಇದರಲ್ಲಿ 1,31,714 ಜನ ಸಾವನ್ನಪ್ಪಿದ್ದು 3, 48,279ಜನ ಗಾಯಗೊಂಡಿದ್ದಾರೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (MORTH) ಸಾರಿಗೆ ಸಂಶೋಧನಾ ವಿಭಾಗ (TRW) ಸಿದ್ಧಪಡಿಸಿದ ‘ಭಾರತದಲ್ಲಿ ರಸ್ತೆ ಅಪಘಾತಗಳು – 2020’ ವರದಿಯ ಪ್ರಕಾರ, 2016 ರಿಂದ ರಸ್ತೆ ಅಪಘಾತಗಳ ಸಂಖ್ಯೆಯು ಇಳಿಮುಖವಾಗಿದ್ದು, 2018ರಲ್ಲಿ ಮಾತ್ರ 0.46 ರಷ್ಟು ತುಸು ಹೆಚ್ಚಳ ಕಂಡುಬಂದಿತ್ತು. ಅದನ್ನು ಹೊರತುಪಡಿಸಿ ಸತತ ಎರಡನೇ ವರ್ಷ, 2020 ರಲ್ಲಿ ಕೂಡ ಒಟ್ಟು ರಸ್ತೆ ಅಪಘಾತಗಳ ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಅಪಘಾತದಲ್ಲಿ ಗಾಯಗೊಂಡವರ ಸಂಖ್ಯೆ 2015 ರಿಂದ ಕಡಿಮೆಯಾಗಿದೆ. 2020ರಸ್ತೆ ಅಪಘಾತದಲ್ಲಿ ಹೆಚ್ಚು ಗಾಯಗೊಂಡವರು ಯುವಕರೇ ಆಗಿದ್ದಾರೆಂದು ಈ ವರದಿ ಬಿಂಬಿಸಿದೆ. ಸುಮಾರು 18 ವರ್ಷ ಮೇಲ್ಪಟ್ಟ  ಯುವಕರು 2020 ರಲ್ಲಿ 69% ಅಪಘಾತಗಳಿಗೆ ಒಳಗಾಗಿರುವುದಾಗಿ ವರದಿ ತಿಳಿಸಿದೆ.

2020 ರಲ್ಲಿ ರಸ್ತೆ ಅಪಘಾತದಲ್ಲಿ ಗಮನಾರ್ಹವಾದ ಇಳಿಕೆ ಕಂಡ ಪ್ರಮುಖ ರಾಜ್ಯಗಳು ಕೇರಳ, ತಮಿಳುನಾಡು, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕ. ಇದೇ ವರ್ಷ ರಸ್ತೆ ಅಪಘಾತದ ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡ ರಾಜ್ಯಗಳಾಗಿ ತಮಿಳುನಾಡು, ಗುಜರಾತ್, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಆಂಧ್ರಪ್ರದೇಶ ಸ್ಥಾನ ಪಡೆದಿವೆ.

ರಸ್ತೆ ಅಪಘಾತದಲ್ಲಿ ಸಾವು-ನೋವು ಇಳಿಕೆಯಾಗಲು ಮುಖ್ಯ ಕಾರಣ ಲಾಕ್‌ ಡೌನ್‌ ಪ್ರಭಾವ ಇರಬಹುದೆಂದು ಹಲವರ ಅಭಿಪ್ರಾಯ. ಕೊರೊನಾ ಸಾಂಕ್ರಾಮಿಕ ರೋಗದಿಂದ ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆಯಾದ ಕಾರಣ ಜನ ರಸ್ತೆಗಿಳಿಯುವುದು ಕಡಿಮೆಯಾಗಿತ್ತು. ಅದರಲ್ಲೂ ಅಡ್ಡಾದಿಡ್ಡಿ ಪ್ರಯಾಣಿಸುತ್ತಿದ್ದ ಯುವಜನತೆಗೆ ಬ್ರೇಕ್‌ ಹಾಕಿದಂತಾಗಿತ್ತು.

Sneha Gowda

Recent Posts

ಹಜ್ ಯಾತ್ರಾರ್ಥಿಗಳಿಗೆ ಉಚಿತ ಲಸಿಕಾ ಕಾರ್ಯಕ್ರಮ

ಪ್ರಸಕ್ತ ಸಾಲಿನಲ್ಲಿ ಹಜ್ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೆ ಜಿಲ್ಲಾ ವಕ್ಫ್ ಮಂಡಳಿ, ಜಿಲ್ಲಾಸ್ಪತ್ರೆ ಹಾಗೂ ತಾಜಿರಾನ್ ಮಸೀದಿ ಸಹಯೋಗದಲ್ಲಿ ನಗರದ…

1 min ago

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಮಹಿಳೆಯರಿಂದ ವಿಶೇಷ ಪೂಜೆ, ಪ್ರಾರ್ಥನೆ

ದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದು ಹೆಮ್ಮೆಯ ನಾಯಕ ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸಿ ವಿಜಯಪುರ…

13 mins ago

ಅವರಿಗೆ ನೀವು ಆತ್ಮನಿರ್ಭರರಾಗಿರುವುದು ಇಷ್ಟವಿಲ್ಲ: ಪ್ರಿಯಾಂಕಾ ಗಾಂಧಿ

ಬಿಜೆಪಿ ನಿಮ್ಮನ್ನು ೫ಕೆಜಿ ರೇಷನ್ನಿನ ಮೇಲೆ ಅವಲಂಬಿತರನ್ನಾಗಿಸಲು ನೋಡುತ್ತಿದೆ. ನೀವು ಆತ್ಮನಿರ್ಭರರಾಗುವುದನ್ನು ಅವರು ಸಹಿಸುವುದಿಲ್ಲ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ…

14 mins ago

ಚಾಮರಾಜನಗರ: ಸಿಡಿಲು ಬಡಿದು ಮೂರು ಜಾನುವಾರುಗಳು ಸಾವು

ಸಿಡಿಲು ಬಡಿದು ಮೂರು ಜಾನುವಾರುಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹನೂರು ತಾಲ್ಲೂಕಿನ ಚೆನ್ನೂರು ಗ್ರಾಮದಲ್ಲಿ ನಡೆದಿದೆ.

36 mins ago

ರಾಯ್‌ಬರೇರಿಯಲ್ಲಿ ರಾಹುಲ್‌ ಗಾಂಧಿ ನಾಮಪತ್ರ ಸಲ್ಲಿಕೆ; ಕಿಶೋರಿ ಶರ್ಮಾ ಪಾಲಾದ ಅಮೇಥಿ

ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿರು ಕಾಂಗ್ರೆಸ್‌ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಕಡೆಗೂ ತೆರೆ ಬಿದ್ದಿದ್ದು, ರಾಹುಲ್‌ ಗಾಂಧಿ ತಮ್ಮ…

42 mins ago

ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ

ಕಾರ್ಕಳದಲ್ಲಿ ಕಳೆದ ವರ್ಷದಿಂದ ವಿವಾದದ ಕೇಂದ್ರ ಬಿಂದುವಾಗಿದ್ದ ಪರಶುರಾಮ ಮೂರ್ತಿ ಮತ್ತೆ ಹಲವಾರು ಊಹಾಪೋಹಗಳಿಗೆ ಕಾರಣವಾಗುತ್ತಿದೆ. ನಿನ್ನೆಯಿಂದ ಮೂರ್ತಿಯ ಉಳಿದ…

1 hour ago