ನಂಜನಗೂಡು: ಆನ್ಲೈನ್ ನಲ್ಲಿ ಔಷಧಿಗಳನ್ನು ಮಾರಾಟ ಮಾಡುವುದನ್ನು ವಿರೋಧಿಸಿ ನಂಜನಗೂಡಿನಲ್ಲಿ ಔಷಧಾಲಯ ವರ್ತಕರ ಸಂಘದಿಂದ ಮೌನ ಪ್ರತಿಭಟನೆ ನಡೆಸಲಾಯಿತು.

ಕಪ್ಪುಪಟ್ಟಿ ಧರಿಸಿ ತಾಲ್ಲೂಕು ಆಡಳಿತ ಕಚೇರಿಯ ಮುಂದೆ ಮೌನ ಪ್ರತಿಭಟನೆ ಮಾಡಿ ಮೌನದಿಂದಲೇ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ವರ್ತಕರು ಭಾಗಿಯಾಗಿದ್ದು, ಆನ್ಲೈನ್ ನಲ್ಲಿ ಔಷಧಿಗಳನ್ನು ಮಾರಾಟ ಮಾಡುವುದರಿಂದ ನಮ್ಮ ವ್ಯಾಪಾರಕ್ಕೆ ತೊಂದರೆಯಾಗುತ್ತದೆ.

ಇದರಿಂದ ಸಾರ್ವಜನಿಕರ ಮೇಲೆ ದುಷ್ಪರಿಣಾಮ ಬೀರುತ್ತದೆ. ಕೆಲವೊಂದು ಔಷಧಿಗಳು ವೈದ್ಯರ ಚೀಟಿ ಇಲ್ಲದೆ ನೀಡಬಾರದು ಆನ್ಲೈನ್ ನಲ್ಲಿ ಇದನ್ನು ಸುಲಭವಾಗಿ ವ್ಯಸನಿಗಳು ಪಡೆದುಕೊಳ್ಳಬಹುದು.

ಇದೊಂದು ಜಾಲವಾಗಿ ಪರಿಣಮಿಸಬಹುದು ಎಂದು ವರ್ತಕರು ತಿಳಿಸಿದರು. ಈ ಕೂಡಲೇ ಆನ್ಲೈನ್ ನಲ್ಲಿ ಔಷಧಿಗಳನ್ನು ಮಾರಾಟ ಮಾಡುವುದನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಡಾ.ಸ್ಮಿತಾ ರಾಮು ರವರಿಗೆ ಮನವಿ ಪತ್ರ ಸಲ್ಲಿಸಿದರು.