ನಂಜನಗೂಡು: ಶ್ರವಣ ದೋಷವಿದ್ದರೂ ವಿದ್ಯಾರ್ಥಿಯು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾನೆ. ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಕೆ.ಮಹದೇವ ಪ್ರಸಾದ್ ಎಂಬ ವಿದ್ಯಾರ್ಥಿಯೂ 600 ಅಂಕಗಳಿಗೆ 529 ಅಂಕಗಳನ್ನು ಗಳಿಸಿದ್ದಾನೆ.

ದ್ವಿತೀಯ ಪಿಯುಸಿ ತರಗತಿಗಳಲ್ಲಿ ಉಪನ್ಯಾಸಕರು ಪಾಠ ಪ್ರವಚನ ಮಾಡುವಾಗ ವಿದ್ಯಾರ್ಥಿ ಮಹದೇವ ಪ್ರಸಾದ್ ಗೆ ಅಷ್ಟಾಗಿ ಕಿವಿ ಕೇಳುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಶ್ರವಣದೋಷವಿದ್ದರೂ, ಪುಸ್ತಕಗಳನ್ನು ಓದಿಕೊಂಡು ಪರೀಕ್ಷೆಯನ್ನು ಎದುರಿಸಿ ವಿಜ್ಞಾನ ವಿಭಾಗದಲ್ಲಿ 529 ಅಂಕಗಳನ್ನು ಗಳಿಸಿ ಎರಡನೇ ಸ್ಥಾನಕ್ಕೆ ಬಂದಿದ್ದಾನೆ.

ತಂದೆ ತಾಯಿ ಇಬ್ಬರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಬಡತನದ ನಡುವೆಯೂ ಪಿಯುಸಿ ವಿದ್ಯಾಭ್ಯಾಸ ಮುಗಿಸಿದ್ದಾನೆ. ಕಿವಿ ಕೇಳದ ಪರಿಣಾಮ ಕಡಿಮೆ ಅಂಕ ಬಂದಿದೆ ಎಂದು ಮಹದೇವ ಪ್ರಸಾದ್ ದುಃಖಿತನಾಗಿದ್ದಾನೆ. ಕಿವಿ ಸಮಸ್ಯೆ ಇರುವುದರಿಂದ ನನಗೆ ಕಿವಿಗೆ ಹಾಕುವ ಮಿಷಿನ್ ಅನ್ನು ಒದಗಿಸುವಂತೆ ಹಾಗೂ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸಹಾಯ ಕೋರಿದ್ದಾನೆ. ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಸರಳಾ ವಿದ್ಯಾರ್ಥಿಗೆ ಸಿಹಿ ತಿನ್ನಿಸಿ ಅಭಿನಂದನೆ ಸಲ್ಲಿಸಿದ್ದಾರೆ.

View this post on Instagram

A post shared by News Karnataka (@newskarnataka)