ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಿಂದ ಜಿ.ಟಿ ದೇವೇಗೌಡರಿಗೆ ಕೋಕ್ ಕೊಡ್ತಾರೆ ಎಂಬ ಚರ್ಚೆ ವಿಚಾರವಾಗಿ ಮೈಸೂರಿನಲ್ಲಿ ಜಿಟಿ ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಮೈಸೂರಿನ ಜನತೆಗೆ ಹಾಗೂ ಚಾಮುಂಡೇಶ್ವರಿ ಜನತೆಗೆ ನಾನು ಏನು ಅಂತ ಗೊತ್ತಿದೆ. ಯಾವ ನಾಯಕರಿಗೂ ನಾನು ದ್ರೋಹ ಮಾಡುವ ಬುದ್ಧಿ ಇಲ್ಲ, ನಾನು ಯಾವತ್ತು ನಾಯಕತ್ವವನ್ನು ನಂಬಿ ಬೆಂಬಲವನ್ನು ಕೊಡುವುದು. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ನಂತರ 3 ಬಾರಿ ಎಂಎಲ್ ಎ ಆಗಿ ಕುಮಾರಪರ್ವ, ಮರಳಿ ಮನೆಗೆ ಕಾರ್ಯಕ್ರಮ ಮಾಡಿದ್ದೇನೆ.

ಅಲ್ಲಿಂದ ಇಲ್ಲಿಯವರೆಗೂ ಮೊದಲ ಬಾರಿಗೆ ಕುಮಾರಸ್ವಾಮಿ ನಾಯಕತ್ವಕ್ಕೆ ಮೆರವಣಿಗೆ ಮಾಡಿರುವುದು, ನನ್ನ ಕ್ಷೇತ್ರದ ದಲಿತರ ಮನೆಯಲ್ಲಿ ವಾಸ್ತವ್ಯ ಮಾಡಿಸಿರುವುದು, ಇವತ್ತಿಗೂ ನಾನು ದೇವೇಗೌಡ ಕುಮಾರಸ್ವಾಮಿ ಜೊತೆಗೆ ಒಟ್ಟಾಗಿ ಇದ್ದೇನೆ. ಚಾಮುಂಡೇಶ್ವರಿ ಕ್ಷೇತ್ರ ನನ್ನನು ಅವರ ಮನೆಯ‌ ಮಗನ ರೀತಿ, ಸಹೋದರನ ರೀತಿ ನೋಡಿಕೊಂಡಿದ್ದೆ, ನಾನು ಜೆಡಿಎಸ್ ನಿಂದ ಗೆದ್ದಿದ್ದೇನೆ ಈಗಲೂ ಜೆಡಿಎಸ್ ನಲ್ಲಿ ಇದ್ದೇನೆ ಮುಂದೆಯು ಜೆಡಿಎಸ್ ನಿಂದ ಚುನಾವಣೆಗೆ ನಿಲ್ಲುತೇನೆ.

ನಾನು ಯಾವತ್ತು ಪಕ್ಷದ ವರಿಷ್ಠರ ವಿರುದ್ದ ಮಾತನಾಡಿಲ್ಲ, ನನ್ನ ಕ್ಷೇತ್ರದ ದೊಡ್ಡದು ಅದರ ಕೆಲಸ ಮಾಡುವುದರಲ್ಲಿ ಬ್ಯುಸಿಯಾಗಿದ್ದೇನೆ. ಚುನಾವಣೆ ಇನ್ನು ಎರಡು ವರ್ಷ ಇದೆ. ಚುನಾವಣೆ ಸಂದರ್ಭದಲ್ಲಿ ಅದನ್ನು ಮಾತನಾಡೋಣ, ನಾನು ಜೆಡಿಎಸ್ ನಲ್ಲಿ ಇದ್ದೀನಿ ಒಂದು ಕಾಲನ್ನು ಹೊರಗಡೆ ಹಾಕಿಲ್ಲ ಹಾಕುವುದು ಇಲ್ಲ, ನಾನು ಯಾಕೆ ಪಕ್ಷದ ಮೇಲೆ ನೋವು ಮಾಡಿಕೊಡಿದ್ದೇನೆ ಎಂದು ನಮ್ಮ ಪಕ್ಷದ ವರಿಷ್ಠರಿಗೆ, ಕೇಂದ್ರ ಮಂತ್ರಿಗಳಿಗೆ ಗೊತ್ತು.

ನಾನು ಪಕ್ಷದ ಕೋರ್ ಕಮಿಟಿ ಅಧ್ಯಕ್ಷನಾಗಿ ರಾಜ್ಯವನ್ನು ಪ್ರವಾಸ ಮಾಡಿದ್ದೇನೆ. ಪಕ್ಷದ ಕಾರ್ಯಕರ್ತರನ್ನು ಗಟ್ಟಿಗೊಳಿಸುವ ಕೆಲಸ ಮಾಡಿದ್ದೇನೆ. ಚುನಾವಣೆ ಸಮೀಪ ಎಲ್ಲವೂ ಸರಿಯಾಗುತ್ತೆ ನಮಗೂ ಒಳ್ಳೆ ಕಾಲ ಬರುತ್ತೆ ಎಂದು ಮೈಸೂರಿನಲ್ಲಿ ಜಿಟಿ ದೇವೇಗೌಡ ಹೇಳಿಕೆ ನೀಡಿದರು.