ಮೈಸೂರು : ಜಗತ್ಪ್ರಸಿದ್ಧ ಮೈಸೂರು ದಸರಾ ಮಹೋತ್ಸವ ನಡೆಯಲಿದ್ದು, ದಸರಾ ನವರಾತ್ರಿಗೆ ರಾಜ ವೈಭವದ ಮುನ್ನುಡಿ ಸಿಗಲಿದೆ. ಮೈಸೂರು ಅರಮನೆಯಲ್ಲಿ ಇಂದು ರತ್ನಖಚಿತ ಸಿಂಹಾಸನ ಜೋಡಣೆ ಮಾಡಲಿದ್ದಾರೆ. ರಾಜವಂಶಸ್ಥರ ಖಾಸಗಿ ದರ್ಬಾರ್ಗೆ ಸಿಂಹಾಸನ ಸಜ್ಜಾಗಿದೆ.
ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ನೇತೃತ್ವದಲ್ಲಿ ಜೋಡಣೆ ಕಾರ್ಯ ನಡೆಯಲಿದೆ. ಧಾರ್ಮಿಕ ವಿಧಿವಿಧಾನಗಳ ಬಳಿಕ ಅರಮನೆಯ ಭದ್ರತಾ ಕೊಠಡಿಯಿಂದ ರತ್ನಖಚಿತ ಸಿಂಹಾಸನದ ಬಿಡಿಭಾಗಗಳು ದರ್ಬಾರ್ ಹಾಲ್ಗೆ ರವಾನೆಯಾಗಲಿದೆ.
ಒಟ್ಟು 13 ಬಿಡಿಭಾಗಗಳನ್ನ ಜೋಡಿಸಿ ಸಿಂಹಾಸನ ಸಿದ್ಧಗೊಳಿಸಲಾಗುತ್ತದೆ. 13 ಬಿಡಿಭಾಗಗಳಿಂದ ಸಿಂಹಾಸನಕ್ಕೆ ಮರುಜೋಡಣೆ ಮಾಡಲಾಗುತ್ತದೆ. ಗಣಪತಿ ಹೋಮ, ನವಗ್ರಹ ಹೋಮ, ಚಾಮುಂಡಿ ಪೂಜೆ, ಶಾಂತಿ ಹೋಮ ನಡೆಯಲಿದೆ. ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಪ್ರವಾಸಿಗರಿಗೆ ಅರಮನೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಅ.11ರಿಂದ ಶರನ್ನವರಾತ್ರಿ ಯದುವೀರ್ ಒಡೆಯರ್ರಿಂದ ಖಾಸಗಿ ದರ್ಬಾರ್ ನಡೆಯಲಿದೆ.

