ಮಂಗಳೂರು: ದ.ಕ ಜಿಲ್ಲೆಯಲ್ಲಿ ಭಾರೀ ಗುಡುಗು ಮಿಂಚು ಸಹಿತ ಮಳೆಯಾಗಿದೆ. ಮುಂಜಾನೆ ವೇಳೆಗೆ ಭಾರೀ ಸಿಡಿಲಿಗೆ ಮನೆ ಸಂಪೂರ್ಣ ಜಖಂ ಆಗಿರುವ ಘಟನೆ ದ.ಕ‌ಜಿಲ್ಲೆ ಬಂಟ್ವಾಳದ ಅಜ್ಜಿಬೆಟ್ಟು ಗ್ರಾಮದ ಅನಿಲ್ದಡ್ಡ ಎಂಬಲ್ಲಿ ನಡೆದಿದೆ.

ನಾಗೇಶ್ ಕುಲಾಲ್ ಎಂಬುವವರ ಮನೆ ಮೇಲೆ ಸಿಡಿಲು ಹೊಡೆದಿದೆ. ಮುಂಜಾನೆ ನಾಲ್ಕು ಗಂಟೆಯ ವೇಳೆಗೆ ಘಟನೆ ನಡೆದಿದೆ. ಘಟನೆಯಲ್ಲಿ ನಾಗೇಶ್ ಕುಲಾಲ್ ಪತ್ನಿ ಕುಶಲ ಅಸ್ವಸ್ಥಗೊಂಡಿದ್ದಾರೆ.
ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಭಾರೀ ಸಿಡಿಲಿನ ಹೊಡೆತಕ್ಕೆ ಮನೆ ಸಂಪೂರ್ಣ ಜಖಂ ಆಗಿದೆ. ಮನೆಯ ಹಂಚು, ಗೋಡೆ, ಕಿಟಕಿ ಗ್ಲಾಸ್ ಗಳು ಪುಡಿ ಪುಡಿಯಾಗಿದೆ. ದ.ಕ ಜಿಲ್ಲೆಯಲ್ಲಿ ಮುಂಜಾನೆ ವೇಳೆಗೆ ಸುರಿದ ಭಾರೀ ಮಳೆಯಿಂದ ಭಾರೀ ಹಾನಿಯಾಗಿದೆ.