ಮೈಸೂರು: ಖಾಸಗಿ ಆಪ್ ಡೌನ್ ಲೋಡ್ ಮಾಡಿ ಟ್ರೇಡಿಂಗ್ ಮಾಡಿದ ವ್ಯಕ್ತಿಗೆ 47.44 ಲಕ್ಷ ವಂಚನೆಯಾಗಿದೆ. ಮೈಸೂರಿನ ಜೆಪಿ ನಗರ ನಿವಾಸಿ ಸಂತೋಷ್ ಹಣ ಕಳೆದುಕೊಂಡವರು.

ವಂಚಕರು ಮೊದಲು ವಾಟ್ಸಾಪ್ ಗ್ರೂಪ್ ನಲ್ಲಿ ಸೇರಿಸಿ ZERODHA ನಲ್ಲಿ ಟ್ರೇಡಿಂಗ್ ಮಾಡುವ ಬಗ್ಗೆ ಟ್ರೈನಿಂಗ್ ನೀಡಿದ್ದಾರೆ. ನಂತರ ವಂಚಕರು ತಿಳಿಸಿದ ಖಾಸಗಿ ಆಪ್ ಡೌನ್ ಲೋಡ್ ಮಾಡಿದ ಸಂತೋಷ್ ವಿವಿಧ ಹಂತಗಳಲ್ಲಿ 47.44 ಲಕ್ಷ ಹಣ ತೊಡಗಿಸಿದ್ದಾರೆ.
ನಂತರದ ದಿನಗಳಲ್ಲಿ ಸಂತೋಷ್ ರವರಿಗೆ ತಾವು ಮೋಸ ಹೋಗಿರುವುದಾಗಿ ಖಚಿತವಾಗಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

