ನಂಜನಗೂಡು: ಮೈಸೂರು ಜಿಲ್ಲೆಯ ನಂಜನಗೂಡು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರ್ ವರ್ಗಾವಣೆಯಾಗಿದ್ದಾರೆ. ಬೆಂಗಳೂರಿನ ವಿಕಾಸಸೌಧಕ್ಕೆ ವರ್ಗಾವಣೆ ಆಗಿದೆ. ಶಿವಕುಮಾರ್ ಕಾಸ್ನೂರು ಸ್ಥಳಕ್ಕೆ ರಾಮನಗರ ತಹಶೀಲ್ದಾರ್ ಸ್ಮಿತಾ ರನ್ನ ನಿಯೋಜಿಸಲಾಗಿದೆ.

ವರ್ಗಾವಣೆಯಾದ ಶಿವಕುಮಾರ್ ಕಾಸ್ನೂರು ರವರಿಗೆ ಸಿಬ್ಬಂದಿವರ್ಗ ಆತ್ಮೀಯವಾಗಿ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದೆ. ಅವರ ಅವಧಿಯಲ್ಲಿ ಸಾರ್ವಜನಿಕರಿಗೆ ನೀಡಿದ ಹಲವು ಸೇವೆಗಳ ಭಾವಚಿತ್ರಗಳನ್ನ ಬಳಸಿ ಚೊಕ್ಕದಾದ ವಿಡಿಯೋ ರಚಿಸಿ ಬಿಡುಗಡೆ ಮಾಡಿದ್ದಾರೆ.

ಜೊತೆಗೆ ಕಛೇರಿಯಲ್ಲಿ ನಟ ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರದ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ ಹಾಡನ್ನ ಸಾಮೂಹಿಕವಾಗಿ ಹಾಡಿ, ಎಲ್ಲಾ ಸಿಬ್ಬಂದಿಗಳು ಬೀಳ್ಕೊಟ್ಟಿದ್ದಾರೆ. ಅಲ್ಲದೆ ಹೂವಿನ ಮಳೆ ಸುರಿಸಿ ಅದ್ದೂರಿಯಾಗಿ ಬೀಳ್ಕೊಡುಗೆ ನೀಡಿ ಶುಭ ಹಾರೈಸಿದರು. ನೂತನ ತಹಶೀಲ್ದಾರ್ ಸ್ಮಿತಾ ಅವರಿಗೂ ಅದ್ದೂರಿ ಸ್ವಾಗತ ಕೋರಿದ್ದಾರೆ.