ನಂಜನಗೂಡು: ವರುಣಾ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಚಿನ್ನಂಬಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಿದ್ದಾರೆ.
ಮಕ್ಕಳಿಗೆ ಸಂಕ್ರಾಂತಿ ಹಬ್ಬ ಎಂದರೆ ಏನು? ಸಂಕ್ರಾಂತಿ ಹಬ್ಬವನ್ನು ಯಾವ ಕಾರಣಕ್ಕೆ ಆಚರಣೆ ಮಾಡುತ್ತಾರೆ ಎಂಬುದನ್ನು ಶಾಲೆಯ ಶಿಕ್ಷಕರು ತಿಳಿಸುವ ಉದ್ದೇಶದಿಂದ ಶಾಲೆಯಲ್ಲಿ ಸಡಗರ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.
ಶಾಲೆಯಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ರಂಗೋಲಿಯನ್ನು ಬಿಟ್ಟು ನಂತರ ಮಕ್ಕಳೆಲ್ಲರೂ ಸೇರಿ ನೃತ್ಯವನ್ನು ಮಾಡಿ ಶಾಲೆಯಲ್ಲಿ ವಿವಿಧ ಆಟಗಳನ್ನು ಆಡಿಸಿದ್ದಾರೆ. ರೈತ ಹೇಗೆ ಭೂಮಿಯನ್ನು ಹುತ್ತಿ ಅಲ್ಲಿ ಬೆಳೆಯನ್ನು ಬೆಳೆದು ಸುಗ್ಗಿಯಿಂದ ಹುಗ್ಗಿಯವರೆಗೂ ಹೇಗೆ ಕೆಲಸವನ್ನು ಮಾಡುತ್ತಾನೆ ಎಂಬುದನ್ನು ಮಕ್ಕಳು ತಿಳಿಸಿಕೊಟ್ಟಿದ್ದಾರೆ.
ಶಾಲೆಯಲ್ಲಿ ಮಕ್ಕಳು ರೈತನ ವೇಷ ಭೂಷಣವನ್ನು ಧರಿಸಿ ನೇಗಿಲು ಹಾಗೂ ಕುಡುಗೋಲನ್ನು ಹಿಡಿದು ಮಕ್ಕಳು ನಿಂತಿದ್ದಾರೆ. ಅದರ ಜೊತೆಗೆ ಹೆಣ್ಣು ಮಕ್ಕಳು ಸಂಕ್ರಾಂತಿ ಹಬ್ಬದ ವಿಶೇಷವಾಗಿ ಸೀರೆಯನ್ನು ಹುಟ್ಟು, ಶಿಕ್ಷಕರು ಮತ್ತು ಪೋಷಕರಿಗೆ ಎಳ್ಳು ಬೆಲ್ಲ ನೀಡಿದ್ದಾರೆ. ಇದರಿಂದ ಮಕ್ಕಳಿಗೆ ಸಂಕ್ರಾಂತಿ ಹಬ್ಬದ ಆಚರಣೆಯ ಬಗ್ಗೆ ಅದರ ಮಹತ್ವದ ಬಗ್ಗೆ ಮಕ್ಕಳಿಗೆ ಶಿಕ್ಷಕರು ತಿಳಿಸಿಕೊಟ್ಟಿದ್ದಾರೆ.
ಚಿನ್ನಂಬಳ್ಳಿ ಗ್ರಾಮಸ್ಥರು ಮಕ್ಕಳಿಗೆ ಸಾಥ್ ನೀಡಿದ್ದಾರೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಶಾಲೆಯಲ್ಲಿ ಮಕ್ಕಳು ಖುಷಿ ಪಟ್ಟು ಕುಣಿದು ಕುಪ್ಪಳಿಸಿ ರಂಜಿಸಿದ್ದಾರೆ. ಈ ವೇಳೆ ಶಾಲೆಯ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಸೇರಿದಂತೆ ಪೋಷಕರು ಹಾಜರಿದ್ದರು.

