ಮೈಸೂರು : ದರೋಡೆಕೋರರ ಅಟ್ಟಹಾಸ ಮೈಸೂರು ಜಿಲ್ಲೆಯಲ್ಲಿ ಮುಂದುವರೆದಿದ್ದು, ಪೆಟ್ರೋಲ್ ಬಂಕ್‌ನಲ್ಲಿ ದರೋಡೆ ನಡೆದಿರುವ ಘಟನೆ ಕಿರುಮುದ್ದನಹಳ್ಳಿ ಬಳಿ ನಡೆದಿದೆ.

ಪೆಟ್ರೋಲ್ ಹಾಕಿಸುವ ನೆಪದಲ್ಲಿ ಬಂದು ಕೃತ್ಯ ನಡೆದಿದೆ. ಐವರು ದುಷ್ಕರ್ಮಿಗಳಿಂದ ಕೃತ್ಯ ನಡೆದಿದ್ದು, ನಂಬರ್ ಪ್ಲೇಟ್ ಇಲ್ಲದ ಸ್ಕೋಡಾ ಕಾರ್‌‌ನಲ್ಲಿ ಬಂದು ಹಲ್ಲೆ ನಡೆಸಲಾಗಿದೆ.

ಡ್ರ್ಯಾಗನ್ ಚಾಕು ತೋರಿಸಿ ಡಕಾಯಿತರು ಹಣ ದೋಚಿದ್ದಾರೆ. ಇಬ್ಬರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.