ಮೈಸೂರು : ಕನ್ನಡ ಶಾಲೆಯ ವಿರುದ್ಧ ಕೇರಳ ಸರ್ಕಾರ ತಂದಿರುವ ನೂತನ ಕಾಯ್ದೆ ವಿರೋಧಿಸಿ ಮೈಸೂರಿನ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಕೇರಳ ಸಿಎಂ ಪಿಣರಾಯ್ ವಿಜಯನ್ ವಿರುದ್ಧ ಘೋಷಣೆ ಕೂಗಿದರು. ಎಐಸಿಸಿ ಕಾರ್ಯಾದರ್ಶಿ ಕೆ.ಸಿ ವೇಣುಗೋಪಾಲ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೇರಳ ಸರ್ಕಾರ ಎಚ್ಚೆತ್ತು ಕೊಳ್ಳದಿದ್ರೆ ಗಡಿಯಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.
ಕನ್ನಡಿಗರ ಮೇಲೆ ದಬ್ಬಾಳಿಕೆ ಬಿಡಬೇಕು. ಕನ್ನಡಿಗರಿರುವ ಕಡೆಗಳಲ್ಲಿ ಕನ್ನಡವೇ ಪ್ರಮುಖವಾಗಬೇಕು. ಕರ್ನಾಟಕ ಸರ್ಕಾರ ಮಧ್ಯಪ್ರವೇಶ ಮಾಡಿ ಕೇರಳ ತಂದಿರುವ ಕಾಯ್ದೆ ಕಾರ್ಯರೂಪಕ್ಕೆ ಬಾರದಂತೆ ನೋಡಿಕೊಳ್ಳಬೇಕು ಎಂದು ಮೈಸೂರಿನಲ್ಲಿ ಕನ್ನಡಿಗರು ಒತ್ತಾಯಿಸಿದರು.

