ಮೈಸೂರು: ಪ್ರತಾಪ್ ಸಿಂಹ ವಿರುದ್ಧ ಜಿಲ್ಲಾ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ನಕಲಿ ಹಿಂದುತ್ವವಾದಿ ಪ್ರತಾಪ್ ಸಿಂಹ ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೋಮುವಾದಿ ಬಿಜೆಪಿ, ಕೋಮುವಾದಿ ಪ್ರತಾಪ್ ಸಿಂಹ ಎಂದು ಪ್ರತಿಭಟನೆ ಮಾಡಿದರು.
ತಿ.ನರಸೀಪುರದಲ್ಲಿ ಕೋಮು ಪ್ರಚೋದನೆ ಮಾಡ್ತಿದ್ದಾರೆ ಎಂದು ಪ್ರತಿಭಟಿಸಿದರು. 420 ಪ್ರತಾಪ್ ಸಿಂಹ, ಚಪ್ಪಲಿ ಹಾಕಿ ಗಣೇಶ ಮೂರ್ತಿ ಹಿಡಿದು ಪ್ರತಿಭಟನೆ ಮಾಡಿದ್ದಾರೆ. ಜನರಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡ್ತಿದ್ದಾರೆ.
ಯುವಕರನ್ನು ತಪ್ಪು ದಾರಿಗೆ ಪ್ರತಾಪ್ ಸಿಂಹ ಎಳೆಯುತ್ತಿದ್ದಾರೆ ಎಂದು ಪ್ರತಿಭಟಿಸಿದರು. ದಲಿತ ಹಾಗೂ ಮುಸ್ಲಿಂ ವಿರೋಧಿ ಪ್ರತಾಪ್ ಸಿಂಹ ಎಂದು ಘೋಷಣೆ ಕೂಗಿದರು. ಪ್ರತಾಪ್ ಸಿಂಹರನ್ನು ಗಡಿಪಾರು ಮಾಡಿ ಎಂದು ಒತ್ತಾಯಿಸಿದರು.

