ಮೈಸೂರು : ಚಾಮರಾಜ ಕ್ಷೇತ್ರದ ಜನಕ್ಕೆ ಉಪಕಾರ ಮಾಡದಿದ್ದರು ಉಪದ್ರ ನೀಡುವ ಜನಪ್ರತಿನಿಧಿಗಳು ಬೇಕಿಲ್ಲ. ವಿದ್ಯಾವಂತರೆ ಇರುವ ಚಾಮರಾಜ ಕ್ಷೇತ್ರದ ಜನರಿಗೆ ವಿದ್ಯಾವಂತರೆ ಪ್ರತಿನಿಧಿ ಆಗಲು ಬಯಸುತ್ತಾರೆ. ಬಿಜೆಪಿಯ ಶಂಕರಲಿಂಗೇಗೌಡ ಜನಸ್ನೇಹಿ ಶಾಸಕ ಎಂದು ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದರು.

ಕಾಂಗ್ರೆಸ್‌ನ ವಾಸು ಅಭಿವೃದ್ಧಿ ಸ್ನೇಹಿ ಶಾಸಕ. ಇವರಿಬ್ಬರ ನನಗೆ ಸದಾ ಸ್ಮರಣೀಯರು. ನಾನು ಚಾಮರಾಜ ಕ್ಷೇತ್ರದ ಆಕಾಂಕ್ಷಿ. ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಆಕಾಂಕ್ಷಿಗೂ ಅಭ್ಯರ್ಥಿಗೂ ವ್ಯತ್ಯಾಸ ಗೊತ್ತಿಲ್ಲದೆ ಕೆಲವರು ಏನೇನೋ ಮಾತಾಡುತ್ತಿದ್ದಾರೆ ಎಂದು ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದರು.