ಮೈಸೂರು: ಇಲ್ಲಿನ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಸರಗಳ್ಳರ ಕೈಚಳಕಕ್ಕೆ ಸರ್ಕಾರಿ ಉದ್ಯೋಗಿಯೊಬ್ಬರು ಚಿನ್ನಾಭರಣ ಕಳೆದುಕೊಂಡಿದ್ದಾರೆ. ಪೆಂಡೆಂಟ್ ಸಮೇತ 2.30 ಲಕ್ಷಮೌಲ್ಯದ ಚಿನ್ನದ ಸರ ಕಳ್ಳರ ಪಾಲಾಗಿದೆ.
ಮಳವಳ್ಳಿಯಲ್ಲಿರುವ ಶಿವನಸಮುದ್ರ ಹೈಡ್ರೋ ಪವರ್ ಹೌಸ್ ನಲ್ಲಿ ಎಇ ಆಗಿರುವ ಆಗಿರುವ ಶೀತಲ್. ಎನ್. ಶಿರುಕಾರ್ ಚಿನ್ನಾಭರಣ ಕಳೆದುಕೊಂಡವರು.
ಶೀತಲ್ ಮದುವೆಗಾಗಿ ಮೈಸೂರಿಗೆ ಬಂದಿದ್ದರು. ಫಂಕ್ಷನ್ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ರಶ್ ಇರುವ ಬಸ್ ಹತ್ತುವಾಗ ಖದೀಮರು ಕೈಚಳಕ ತೋರಿಸಿದ್ದಾರೆ.
ವ್ಯಾನಿಟಿ ಬ್ಯಾಗ್ ಜಿಪ್ ತೆರೆದು ಚಿನ್ನಾಭರಣ ಲಪಟಾಯಿಸಿದ್ದಾರೆ. ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

