ಮೈಸೂರು: ಮನೆಯ ಕೊಠಡಿಯಲ್ಲಿ ಚಿರತೆ ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ಮೈಸೂರಿನ ಸಿದ್ದಾರ್ಥ ಬಡಾವಣೆಯಲ್ಲಿ ನಡೆದಿದೆ.
ಚಿರತೆ ಸುರೇಶ್ ಎಂಬುವವರ ನಿವಾಸಕ್ಕೆ ನುಗ್ಗಿದೆ. ಮನೆಯ ಕೊಠಡಿಯ ಮಂಚದ ಕೆಳಗೆ ಚಿರತೆ ಮಲಗಿದೆ. ಕುಟುಂಬಸ್ಥರಿಗೆ ಯಾವುದೇ ರೀತಿಯ ತೊಂದರೆ ಕೊಡದೆ ಚಿರತೆ ಮಲಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಚಿರತೆಯನ್ನ ಸೆರೆ ಹಿಡಿದಿದ್ದಾರೆ.
ಚಿರತೆ ಎಂಟ್ರಿಯಾದಾಗ ಮನೆಯಲ್ಲಿದ್ದ ಸುರೇಶ್ ತಾಯಿ ಶೈಲಜಾ ಅವರ ಕೊಠಡಿಗೆ ಎಂಟ್ರಿ ಕೊಟ್ಟಿದೆ. ಸುರೇಶ್ ಪತ್ನಿ ಸುಜಾತ ಸಮಯಪ್ರಜ್ಞೆ ಹಾಗೂ ಧೈರ್ಯದಿಂದ ಶೈಲಜಾರನ್ನ ರಕ್ಷಣೆ ಮಾಡಿದ್ದಾರೆ.

